ವಂದಿಸಿ ಬೇಡುವೆ ನಾ ವರಗಳ
ವಂದಿಸಿ ಬೇಡುವೆ ನಾ
ವಂದಿಸಿ ಬೇಡುವೆ ಇಂದಿರೆ ಮುಡಿದಂಥ
ಕುಂದ ಮಂದಾರ ನಂದಿವರ್ಧನ ನಾಗಸಂಪಿಗೆ ಪ
ಹಸಿರುಶಾವಂತಿಗೆ ಕುಸುಮ ಮಲ್ಲಿಗೆದಂಡೆ
ಎಸೆವೊ ಕ್ಯಾದಿಗೆ ಪಾರಿಜಾತದ ವರಗಳ1
ಕಟ್ಟಿದ್ದ ಮಾಂಗಲ್ಯ ಕುಂಕುಮ ಗಾಜಿನ ಬಳೆ
ಮುತ್ತೈದೆತನ ಸಂಪತ್ತು ಸಂತಾನಕೆ2
ಕಮಲಾಕಾಂತ ಭೀಮೇಶಕೃಷ್ಣನ್ನ ರಾಣಿ ಮುಡಿದ
ಕಮಲ ಮಲ್ಲಿಗೆ ಕಾಮಿತಾರ್ಥದ ವರಗಳ 3
***