Thursday, 2 December 2021

ವಂದಿಸಿ ಬೇಡುವೆ ನಾ ವರಗಳ ವಂದಿಸಿ ankita bheemesha krishna VANDISI BEDUVE NAA VARAGALA VANDISI



ವಂದಿಸಿ ಬೇಡುವೆ ನಾ ವರಗಳ

ವಂದಿಸಿ ಬೇಡುವೆ ನಾ

ವಂದಿಸಿ ಬೇಡುವೆ ಇಂದಿರೆ ಮುಡಿದಂಥ

ಕುಂದ ಮಂದಾರ ನಂದಿವರ್ಧನ ನಾಗಸಂಪಿಗೆ ಪ


ಹಸಿರುಶಾವಂತಿಗೆ ಕುಸುಮ ಮಲ್ಲಿಗೆದಂಡೆ

ಎಸೆವೊ ಕ್ಯಾದಿಗೆ ಪಾರಿಜಾತದ ವರಗಳ1


ಕಟ್ಟಿದ್ದ ಮಾಂಗಲ್ಯ ಕುಂಕುಮ ಗಾಜಿನ ಬಳೆ

ಮುತ್ತೈದೆತನ ಸಂಪತ್ತು ಸಂತಾನಕೆ2


ಕಮಲಾಕಾಂತ ಭೀಮೇಶಕೃಷ್ಣನ್ನ ರಾಣಿ ಮುಡಿದ

ಕಮಲ ಮಲ್ಲಿಗೆ ಕಾಮಿತಾರ್ಥದ ವರಗಳ 3

***

 

No comments:

Post a Comment