ನೀ ಪಾಲಿಸೋ ಗುರುರಾಯ ಎನ್ನ
ಕಾಪಾಡೀಗ ಮಹರಾಯ ಪ
ಭೂಪತಿ ನೀ ಎನ್ನ ಆಪದ್ಭಾಂಧವ
ಶ್ರೀ - ಪತಿ - ಪದ - ಪ್ರಿಯ ಈ ಪರಿ ಮಾಡದೆ ಅ.ಪ
ಪಾಪಿಗಳೊಳಗೆ ಹಿರಿಯನು ನಾ
ನಿಷ್ಪಾಪಿಗಳರಸೆ ಗುರುರಾಯ
ಅಪಾರ - ಜನುಮದಿ ಬಂದಿಹ
ತಾಪತ್ರಯವ ಕಳಿ ಮಹರಾಯಾ 1
ನೀಚರ ಒಳಗೆ ನೀಚನೊ ಪಾಪ -
ಮೋಚನೆ ಮಾಡೋ ಗುರುರಾಯ
ಯೊಚನೆ ಇಲ್ಲದೆ ಅನ್ಯರ ಅನುದಿನ
ಯಾಚಿಸಿ ಕೆಟ್ಟೆನೊ ಮಹರಾಯಾ 2
ದೀನರ ಒಳಗೆ ದೀನನು ನಾನೈ
ದಾನಿಗಳರಸೇ ಗುರುರಾಯ
e್ಞÁನವು ಇಲ್ಲದೆ ನಾನು ನನ್ನದೆಂದು
ಹೀನ ಮತ್ಯಾದೆನೊ ಗುರುರಾಯ 3
ಅನ್ನವು ಇಲ್ಲದೆ ಅನ್ಯರ ಮನೆಯಲಿ
ಕುನ್ನಿಯಾದೆನೋ ಗುರುರಾಯ
ನಿನ್ನನೆ ನಂಬಿ ಅನ್ಯರ ಬೇಡೊದು
ಘನ್ನತಿ ನಿನಗೆ ಮಹರಾಯಾ 4
ದಾತನೆ ನಿನ್ನಾ ಪೋತನು ನಾನೀ -
ರೀತಿಯ ಮಾಳ್ಪರೆ ಗುರುರಾಯ
ನೀತ ಗುರು ಜಗನ್ನಾಥ ವಿಠಲ ಪದ
ದೂತನು ನೀನೆ ಮಹರಾಯಾ 5
***