Showing posts with label ರನ್ನ ಚಿನ್ನದಕೋಲಹೊನ್ನು ಮುತ್ತಿನಕೋಲ ramesha. Show all posts
Showing posts with label ರನ್ನ ಚಿನ್ನದಕೋಲಹೊನ್ನು ಮುತ್ತಿನಕೋಲ ramesha. Show all posts

Saturday, 16 November 2019

ರನ್ನ ಚಿನ್ನದಕೋಲಹೊನ್ನು ಮುತ್ತಿನಕೋಲ ankita ramesha

by ಗಲಗಲಿಅವ್ವನವರು
ರನ್ನ ಚಿನ್ನದಕೋಲಹೊನ್ನು ಮುತ್ತಿನಕೋಲಪನ್ನಂಗಶಯನ ನಲಿದು ಒಲವೊ ಕೋಲ ಪ.

ಇಂದಿರೇಶಗೆ ರಾಯ ಗಂಧ ಕಸ್ತೂರಿ ತೀಡಿಮಂದಾರಮಲ್ಲಿಗೆ ಮಾಲೆ ಚಂದದಲ್ಹಾಕಿ1

ಶ್ರೀದೇವಿಯರಿಗೆ ಭದ್ರಾ ಕ್ಯಾದಿಗೆ ಮಲ್ಲಿಗೆ ಮುಡಿಸಿಊದು ಪರಿಮಳ ಮ್ಯಾಲೆ ಮೋದವ ಬಟ್ಟು 2

ಅಂಬುಜಾಕ್ಷರಿಗೆ ರಾಯ ತಾಂಬೂಲ ಅಡಿಕೆಯ ಕೊಟ್ಟುಕಂಬುಕಂಠರಿಗೆ ಎರಗಿ ಸಂಭ್ರಮದಿಂದ 3

ಸರಸಿಜಮುಖಿಯರಿಗೆ ಅರಿಷಿಣಕುಂಕುಮಹಚ್ಚಿಸರಸದ ವಸ್ತಗಳ ದ್ರೌಪತಿ ಅರಸಿಗೆ ಇಟ್ಟು 4

ಪಚ್ಚಮುತ್ತಿನ ವಸ್ತ ಅಚ್ಯುತನಂಗದಲೆ ಇಟ್ಟುಉಚಿತ ವಸ್ತ್ರಗಳ ಕೊಟ್ಟು ಸ್ವಚ್ಚ ಮನದಿ 5

ರುಕ್ಮಿಣಿ ಅರಸಿಯರಿಗೆ ಅನಘ್ರ್ಯ ವಸ್ತ್ರವಕೊಟ್ಟುಶೀಘ್ರದಿಂದ ಎರಗಿ ದ್ರೌಪತಿ ಹಿಗ್ಗಿದಳು 6

ತಂದೆ ರಾಮೇಶಗೆ ಮಂದಗಮನೆಯರೆಲ್ಲಗಂಧ ಕುಂಕುಮ ವೀಳ್ಯ ವಸ್ತ ಅಂದದಿಕೊಟ್ಟು 7
*******