Showing posts with label ಒಲ್ಲೆ ಸಂಪದವನೆಲ್ಲವನು ತೆಗೆದುಕೊ ಚೆಲ್ವ ವೇಲಾಪುರೀಶಾ ಸ್ವಾಮಿ vaikunta vittala. Show all posts
Showing posts with label ಒಲ್ಲೆ ಸಂಪದವನೆಲ್ಲವನು ತೆಗೆದುಕೊ ಚೆಲ್ವ ವೇಲಾಪುರೀಶಾ ಸ್ವಾಮಿ vaikunta vittala. Show all posts

Sunday, 1 August 2021

ಒಲ್ಲೆ ಸಂಪದವನೆಲ್ಲವನು ತೆಗೆದುಕೊ ಚೆಲ್ವ ವೇಲಾಪುರೀಶಾ ಸ್ವಾಮಿ ankita vaikunta vittala

 ..

kruti by ಬೇಲೂರು ವೈಕುಂಠ ದಾಸರು belur vaikunta dasaru


ಒಲ್ಲೆ ಸಂಪದವನೆಲ್ಲವನು ತೆಗೆದುಕೊ

ಚೆಲ್ವ ವೇಲಾಪುರೀಶಾ ಸ್ವಾಮಿ ಪ


ಬಲ್ಲವರು ನಿನಗೆ ಸರಿಯಿಲ್ಲೆಂದು ಪೊಗಳುತಿಹ

ಸೊಲ್ಲ ನಾ ಕೇಳಲಾರೆ ಸ್ವಾಮಿ ಅ.ಪ


ಪೆತ್ತಯ್ಯ ತಿರುಮಲಾರ್ಯರು ವರ್ಣಕರ ಚಕ್ರ

ವರ್ತಿಯೆಂಬಾ ಬಿರುದನು

ಒತ್ತಿ ಪೊಗಳಿಸಿಕೊಂಡುದೇನಂದದಲಿ ತಿರು

ಗುತ್ತಿರ್ದಡೇನು ಭಾಗ್ಯಾ

ಮತ್ತದೆನಗಾರ್ಜಿತವೆ ಸತ್ತವರ ಸಂಪದವ-

ನತ್ತಲೇ ಕಳುಹಿಕೊಡದೆ

ಇತ್ತಪರೆ ನಿನ್ನ ದಾಸನುದಾಸರಿಗೆ ಸೇ

ವ್ಯೋತ್ತಮನೆ ಕೆಡಿಸಬೇಡಾ ಸ್ವಾಮಿ 1


ಹರಿಯೆ ನೀ ಒಲಿದೂಳಿಗವನು ಮಾಡಲು ಬಳಿಕ

ಕಿರುನುಡಿಯ ಮೀರದಿರಲು

ಕರುಣದಿಂದಾಗಾಗ್ಯೆ ಕರೆದುಡುಗೊರೆಯ ಕೊಡಲು

ಬಿರುದುಗಳು ಮೆರೆಯುತಿರಲೂ

ಸ್ಥಿರವಿಲ್ಲದಷ್ಟ ಮಹದೈಶ್ವರ್ಯವಿರುತಿರಲು

ಪಿರಿಯರೆಲ್ಲರು ಪೊಗಳಲೂ

ಮೆರೆಯನೇ ಮಿಗೆ ಅಹಂಕರಿಸನೇ ಬೆರೆಯನೇ

ನರಕಕಿಳಿಯನೇ ಮರಳಿ ಜನಿಸನೇ ಸ್ವಾಮಿ 2


ಸುಖವಿಲ್ಲ ಸುಖವಿಲ್ಲ ಸುಖವಿಲ್ಲ ಭಾಗ್ಯದಾ

ಸಕರೆಯನು ನಾನೊಲ್ಲೆನೂ

ಭಕತವತ್ಸಲನೆ ಭಾಗವತಲೋಲುಪನೆ ದುಃ

ಖಕೆ ಕಾರಣವಿಲ್ಲವೆ

ಅಕಳಂಕ ಚರಿತನೆ ಆದಿನಾರಾಯಣನೆ

ಮಕರಧ್ವಜನ ತಾತನೆ

ಸುಖವೀಯೊ ವೈಕುಂಠ ವೇಲಾಪುರಾಧೀಶ

ಭಕುತಿಯನು ಕೊಟ್ಟು ಸಲಹೊ ಸ್ವಾಮಿ 3

***