Sunday, 1 August 2021

ಒಲ್ಲೆ ಸಂಪದವನೆಲ್ಲವನು ತೆಗೆದುಕೊ ಚೆಲ್ವ ವೇಲಾಪುರೀಶಾ ಸ್ವಾಮಿ ankita vaikunta vittala

 ..

kruti by ಬೇಲೂರು ವೈಕುಂಠ ದಾಸರು belur vaikunta dasaru


ಒಲ್ಲೆ ಸಂಪದವನೆಲ್ಲವನು ತೆಗೆದುಕೊ

ಚೆಲ್ವ ವೇಲಾಪುರೀಶಾ ಸ್ವಾಮಿ ಪ


ಬಲ್ಲವರು ನಿನಗೆ ಸರಿಯಿಲ್ಲೆಂದು ಪೊಗಳುತಿಹ

ಸೊಲ್ಲ ನಾ ಕೇಳಲಾರೆ ಸ್ವಾಮಿ ಅ.ಪ


ಪೆತ್ತಯ್ಯ ತಿರುಮಲಾರ್ಯರು ವರ್ಣಕರ ಚಕ್ರ

ವರ್ತಿಯೆಂಬಾ ಬಿರುದನು

ಒತ್ತಿ ಪೊಗಳಿಸಿಕೊಂಡುದೇನಂದದಲಿ ತಿರು

ಗುತ್ತಿರ್ದಡೇನು ಭಾಗ್ಯಾ

ಮತ್ತದೆನಗಾರ್ಜಿತವೆ ಸತ್ತವರ ಸಂಪದವ-

ನತ್ತಲೇ ಕಳುಹಿಕೊಡದೆ

ಇತ್ತಪರೆ ನಿನ್ನ ದಾಸನುದಾಸರಿಗೆ ಸೇ

ವ್ಯೋತ್ತಮನೆ ಕೆಡಿಸಬೇಡಾ ಸ್ವಾಮಿ 1


ಹರಿಯೆ ನೀ ಒಲಿದೂಳಿಗವನು ಮಾಡಲು ಬಳಿಕ

ಕಿರುನುಡಿಯ ಮೀರದಿರಲು

ಕರುಣದಿಂದಾಗಾಗ್ಯೆ ಕರೆದುಡುಗೊರೆಯ ಕೊಡಲು

ಬಿರುದುಗಳು ಮೆರೆಯುತಿರಲೂ

ಸ್ಥಿರವಿಲ್ಲದಷ್ಟ ಮಹದೈಶ್ವರ್ಯವಿರುತಿರಲು

ಪಿರಿಯರೆಲ್ಲರು ಪೊಗಳಲೂ

ಮೆರೆಯನೇ ಮಿಗೆ ಅಹಂಕರಿಸನೇ ಬೆರೆಯನೇ

ನರಕಕಿಳಿಯನೇ ಮರಳಿ ಜನಿಸನೇ ಸ್ವಾಮಿ 2


ಸುಖವಿಲ್ಲ ಸುಖವಿಲ್ಲ ಸುಖವಿಲ್ಲ ಭಾಗ್ಯದಾ

ಸಕರೆಯನು ನಾನೊಲ್ಲೆನೂ

ಭಕತವತ್ಸಲನೆ ಭಾಗವತಲೋಲುಪನೆ ದುಃ

ಖಕೆ ಕಾರಣವಿಲ್ಲವೆ

ಅಕಳಂಕ ಚರಿತನೆ ಆದಿನಾರಾಯಣನೆ

ಮಕರಧ್ವಜನ ತಾತನೆ

ಸುಖವೀಯೊ ವೈಕುಂಠ ವೇಲಾಪುರಾಧೀಶ

ಭಕುತಿಯನು ಕೊಟ್ಟು ಸಲಹೊ ಸ್ವಾಮಿ 3

***


No comments:

Post a Comment