Showing posts with label ಸಾಕೊ ರಂಗ ಅರಸುತನ ಯಾಕೊ ಯಾಕೊ ramesha. Show all posts
Showing posts with label ಸಾಕೊ ರಂಗ ಅರಸುತನ ಯಾಕೊ ಯಾಕೊ ramesha. Show all posts

Tuesday, 15 October 2019

ಸಾಕೊ ರಂಗ ಅರಸುತನ ಯಾಕೊ ಯಾಕೊ ankita ramesha

by ಗಲಗಲಿ ಅವ್ವನವರು

ಸಾಕೊರಂಗ ಅರಸುತನ ಯಾಕೊ ಯಾಕೊ 
ಗೋಕುಲದ ಗೊಲ್ಲರು ನುಗಿಸಿ ಗಲ್ಲವ ಹಿಂಡಿ 
ಕಾಕು ಮಾಡಿದ್ದು ನಿನಗೆ ಬೇಕೋ ಬೇಕೋ                   ।।ಪ।।

ರುದ್ರ ಬ್ರಹ್ಮಹತ್ಯಾಕಾರ ಕ್ಷುದ್ರ ಬಲೀಂದ್ರನು 
ಕದ್ದೊಯ್ದ ಸುವರ್ಣ ಮುಕುಟವ 
ಕದ್ದೊಯ್ದ ಸುವರ್ಣ ಮುಕುಟವ ಬಲರಾಮ 
ಮದ್ಯಪಾನಿ ಎಂದು ನುಡಿದನು ನುಡಿದನು                   ।।೧।।

ಮಗನ ಮಗನು ಬಲು ಕೊಂಡೆಗಾರನಾದ 
ಮಗಳ ಮಗ ನಿನ್ನ ಹಣೆಗಚ್ಚಿದ 
ಮಗಳ ಮಗ ನಿನ್ನ ಹಣೆಗಚ್ಚಿದ್ದು ಕಂಡು 
ನಗತಾರೋ ನಿನ್ನ ಸರಿಯವರು ಸರಿಯವರು               ।।೨।।

ಮಾತೃದ್ರೋಹಿ ಶುಕ ಪಿತೃದ್ರೋಹಿ ಪ್ರಲ್ಹಾದ 
ಭ್ರಾತೃದ್ರೋಹಿ ವಿಭೀಷಣ  
ಭ್ರಾತೃದ್ರೋಹಿ ವಿಭೀಷಣ ಇವರು ಮುಖ್ಯ 
ಪಾತ್ರರೋ ನಿನ್ನ ಕರುಣಕೆ ಕರುಣಕೆ                           ।।೩।।

ಸ್ವಾಮಿ ದ್ರೋಹಿ ಅಕ್ರೂರ ಗುರು ದ್ರೋಹಿ ಪ್ರಲ್ಹಾದ 
ಬ್ರಾಹ್ಮಣರ ದ್ರೋಹಿಗಳು ಯಾದವರು 
ಬ್ರಾಹ್ಮಣರ ದ್ರೋಹಿಗಳು ಯಾದವರು  ನಿನ್ನ ಮುಖ್ಯ 
ಪ್ರೇಮಕ್ಕೆ ವಿಷಯರೋ ವಿಷಯರೋ                          ।।೪।।

ಅರಿಯದಲೆ ನಿನ್ನ ಎದೆಯಲೊದ್ದ ಭೃಗು ಋಷಿ 
ದುರುಳ ಶಿಶುಪಾಲ ಸಭೆಯೊಳು
ದುರುಳ ಶಿಶುಪಾಲ ಸಭೆಯೊಳು ಬೈದದ್ದು 
ಸರಿಬಂತೇ ರಾಮೇಶನ ಮನಸಿಗೆ ಮನಸಿಗೆ                ।।೫।।
*********