Showing posts with label ನೋಡಿದೆನು ವಿಠ್ಠಲನ ದಣಿಯ gopalakrishna vittala. Show all posts
Showing posts with label ನೋಡಿದೆನು ವಿಠ್ಠಲನ ದಣಿಯ gopalakrishna vittala. Show all posts

Monday, 2 August 2021

ನೋಡಿದೆನು ವಿಠ್ಠಲನ ದಣಿಯ ankita gopalakrishna vittala

ನೋಡಿದೆನು ವಿಠ್ಠಲನ ದಣಿಯ ಪ.


ನೋಡಿದೆನು ವಿಠ್ಠಲನ ರೂಪವ

ಪಾಡಿದೆನು ಮನದಣಿಯ ಹರುಷವು

ಮೂಡಿತಂಗದಿ ಮುಗಿದು ಕೈ ನಾ ಮಾಡಿ ಸಾಷ್ಟಾಂಗ

ಬೇಡಿ ಮನಸಿನಭೀಷ್ಟ ಸಂತತ

ನೀಡು ನಿನ್ನಯ ಚರಣ ಸ್ಮರಣಿಯ

ಪಾಡಿಪೊಗಳುವ ಭಾಗ್ಯಬೇಕೆಂದು ಕಾಡಿದೆನು ಹರಿಯಾ 1

ಪಂಚ ಪಂಚ ಉಷಃ ಕಾಲದೀ

ಪಂಚ ಬಾಣನ ಪಿತಗೆ ಆರುತಿ

ಮುಂಚಿನೊಸನಗಳೆಲ್ಲ ತೆಗೆಯುತ ತೈಲವೆರೆಯುವರೂ

ಪಂಚರೂಪಗೆ ಚಂದ್ರಭಾಗೆಯ

ಪಂಚ ಗಂಗೋದಕಗಳೆರೆಯುತ

ಪಂಚ ಅಮೃತ ಸ್ನಾನಗೈಸುವ ಸೊಬಗ ನೋಡಿದೆನು 2

ಬೆಣÉ್ಣ ಬಿಸಿನೀರೆರೆದು ಕೃಷ್ಣಗೆ

ಸಣ್ಣ ವಸ್ತ್ರದಿ ವರಸಿ ಮೈಯ್ಯನು

ಘನ್ನ ಪೀತಾಂಬರವನುಡಿಸುತ ಜರಿಯ ಶಾಲ್ಹೊದಿಸಿ

ಬಣ್ಣದೊಸ್ತ್ರದ ಪಾಗು ಸುತ್ತುತ

ಬೆಣ್ಣೆ ಕಳ್ಳಗೆ ಅಂಗಿ ತೊಡಿಸುತ

ಸಣ್ಣ್ಣ ಮಲ್ಲಿಗೆ ಹಾರ ಉಪವೀತ ಸಡಗರವ ಕಂಡೆ 3.

ಗಂಧ ಅಕ್ಷತೆ ಪುನುಗು ಜವ್ಜಾಜಿ

ಛಂದದಾ ಕಸ್ತೂರಿ ತಿಲಕವು

ಸುಂದರಾಂಗದ ಮುಖಕೆ ಕನ್ನಡಿ ತೋರಿಸುವರಿಂತೂ

ಅಂದದಾ ಪಕ್ವಾನ್ನ ತರುತಲಿ

ಇಂದಿರೇಶಗೆ ಅರ್ಪಿಸುತ್ತಲಿ

ಒಂದು ಧೂಪಾರತಿಯ ಬೆಳಗಿ ಒಂದು ಏಕಾರ್ತಿ 4

ಮಾಡಿ ಪಂಚಾರ್ತಿಗಳ ವಿಠಲಗೆ

ಪಾಡುವರು ಮನದಣಿಯ ಭಕ್ತರು

ನೀಡುವರು ಪಂಚಾಮೃತಂಗಳ ಬೇಡುವರು ಹರಿಯ

ರೂಢಿಯೊಳು ಪಂಡರಿಯ ಕ್ಷೇತ್ರವ

ಮಾಡಿ ಮಂದಿರ ನೆಲಸಿ ರಂಗನು

ಬೇಡಿದವರನು ಪೊರೆವ ಗೋಪಾಲಕೃಷ್ಣವಿಠ್ಠಲನು 5

****