ರಕ್ಷಿಸೋ ಪವಮಾನ ಸದ್ಗುರುವರಾ ಪ
ಜೀವರ ಬಂಧಗಳಿಂದ ಎಲ್ಲ ಪಾವನ ಮಾಳ್ಪದರಿಂದ ದೇವ
ಪಾವನಮೂರ್ತಿಯು ನಿನ್ನ ಮುಖದಿ ಜಗ
ತ್ಪಾವನ ಮಾಳ್ಪುದರಿಂದ ಪವನನೆಂಬೋರೆ ನಿನ್ನ ಅ.ಪ
e್ಞÁನೈಶ್ವರ್ಯ ವೈರಾಗ್ಯ ನಿನಗೆ
ಅನಾದಿಯಿಂದಲಿ ಅದು ಯೋಗ್ಯ (ವಾಗೀ)
ನಿನ್ನ ಸ್ವರೂಪ ಸ್ವಭಾವಕೆ ಯೋಗ್ಯ
ನಿಜ ಘನ್ನ ಮಹಿಮ ನಿನ್ನ ಭಾಗ್ಯ | ಆಹಾ
ತನು ಚತುಷ್ಟಯದೊಳಗನವರತ ವ್ಯಾಪ್ತನೋ
ಇನ್ನೂ ಮುನ್ನೂ ಜಗತ್ಕಾರ್ಯ ನಿನ್ನದೋ ದೇವಾ1
ಬೃಹತಿನಾಮಕ ಕರುಣಾಳು ನಿನ್ನ ದೇಹದಿ
ಭಗವದ್ರೂಪಗಳೂ ನಿತ್ಯನೋಡುತ
ಬಹಿರಾಂತರದೊಳು ಇನ್ನು ಮಹಾಮಹಿಮ
ಅನೇಕಂಗಳು | ಆಹಾ
ಬೃಹತಿ ಛಂದಸ್ಸು ಅನ್ನವು ಶ್ರೀಹರಿಗೆ
ಛಂದಸ್ಸಿನಿಂದಾಚ್ಛಾದಿತ ತ್ವದ್ಗಾತ್ರನೊ2
ಪ್ರಾಣಾಪಾನ ವ್ಯಾನೋದಾನ ಸಮಾನಾದಿ
ಪಂಚಪ್ರಾಣ ಜೀವ
ಶ್ರೇಣಿಗಳೊಳಗೆ ನೀ ಪ್ರವೀಣ ಜಗತ್ರಾಣ
ನೀನಹುದೋ ಸದ್ಗುಣ |ಆಹಾ
ಪ್ರಾಣಾಪಾನದಿಂದ ದೇಹದ ಸ್ಥಿತಿ ಕಾರ್ಯಕ್ಷಣ
ತಪ್ಪಲು ಕುಣಪನೆಂದಪರೋ ಈ ದೇಹಕೆ3
ಇಪ್ಪತ್ತೊಂದು ಸಾವಿರದಾರುನೂರು
ಶ್ವಾಸ ತಪ್ಪದೆ ಜೀವರು ಮಾಡಿ
ಅಹರ್ನಿಶಿ ದೇಹವ ಧರಿಪರೋ ನಿನ್ನ
ಒಪ್ಪಿಗೆಯಂತೆ ಸಾಧಿಪರೋ | ಹಾ
ಅಹೋರಾತ್ರಿ ಶ್ವಾಸನಿಯಾಮಕ ಜೀವರ್ಗೆ
ಅಯುಮಾನವ ನೀವ ಮಾತರಿಶ್ವದೇವಾ 4
ಜೀವರ ಅವಸ್ಥಾತ್ರಯದಿ ಸರ್ವಜೀವರು
ನಿನ್ನಂತರದಿ ಇಟ್ಟು
ಅವರ ಯೊಗ್ಯತೆ ಇಹ ತೆರದಿ ತಕ್ಕ
ಅವಸ್ಥಾಭೋಗ್ಯವನಿತ್ತು ತ್ವರದಿ | ಆಹಾ
ಪಾವನ ಮೂರ್ತಿಗೆ ಅರ್ಪಿಸುತ್ತ ಶ್ರೀಪತಿ
ಪಾದಗಳಿಗೆರಗಿ ಕರವ ಮುಗಿದು ನಿಂದಿಹೆ 5
ಪರಿಶುದ್ದ ಸತ್ವಾತ್ಮಕವಾಗಿ ಇನ್ನು
ನಿರುತ ಪೂರ್ಣಪ್ರಜ್ಞನಾಗೀ ಜೀವ ಸ
ರ್ವರೊಳು ಶುಚಿತಮನಾಗಿ ಇರ್ಪ
ಮಾರುತ ನಿನ್ನೊಳು ಅನುವಾಗಿ |ಆಹಾ
ಹರಿಯು ನಿನ್ನ ಶುಚಿ ತನುವಿನೊಳಿದ್ದು
ಶುಚಿಹೃತ್ ಎಂದು ತಾ ನಿಂದು ನಲಿವನಯ್ಯ6
ಅಂಡಾವರಣದ ಗುಣತ್ರಯ ಕಂಡಿಹೆ ವ್ಯಾಪ್ತಸದ್ಗುಣ ಉ
ದ್ದಂಡ ಮಹದ್ರೂಪನೆ ಮಹಘನ್ನ ಇನ್ನು ಮೃಡನಾಪೇಕ್ಷ
ಶತಗುಣ | ಆಹಾ
ತನುರೂಪದೊಳೆಲ್ಲ ಅಣುರೂಪವಾಗಿಹೆ
ತೃಣಮೊದಲು ಸರ್ವಜೀವರೊಳು ವ್ಯಾಪ್ತನೊ7
ಅಂದು ತ್ರಿಕೋಟಿರೂಪದಲಿ ನಿಂತು
ನಿಂದ ತ್ರಿವಿಕ್ರಮಾವತಾರದಲೀ ಸೇವೇ ಆ
ನಂದದಿ ಸಲಿಸುತ್ತಲಲ್ಲಿ ಇನ್ನು ನಿಂದು ಅಂ
ಡದ ಬಹಿರ್ಭಾಗದಲಿ |ಆಹಾ
ಚಂದದಿ ತ್ರಿಕೋಟಿರೂಪದಿಂದ ಅಂಡ ಖರ್ಪರ
ಕಾಯ್ದ ಉದ್ದಂಡ ಮೂರುತಿಯೊ 8
ವಾಯುಕೂರ್ಮನಾಗಿ ನಿಂದೇ
ಜಗದಾದ್ಯಭಾರವು ಎಲ್ಲ ನಿನ್ನಿಂದೇ
ಎಂದು ಕಾಯಜಪಿತ ತರುವ ಮುಂದೇ ನಿನ್ನ
ಗಾಯತ್ರೀಪತಿಯ ಪಟ್ಟಕೆಂದೇ | ಆಹಾ
ಶ್ರೀಯರಸಾ ಶ್ರೀ ವೇಂಕಟೇಶಾತ್ಮಕ
ಉರಗಾದ್ರಿವಾಸವಿಠಲನ ನಿಜದಾಸ 9
****