Showing posts with label ಉದ್ಧವನು ಯಮುನೆಗೆ ಪೋಗುವಾಗಗದ್ದಲವ indiresha. Show all posts
Showing posts with label ಉದ್ಧವನು ಯಮುನೆಗೆ ಪೋಗುವಾಗಗದ್ದಲವ indiresha. Show all posts

Saturday 28 December 2019

ಉದ್ಧವನು ಯಮುನೆಗೆ ಪೋಗುವಾಗಗದ್ದಲವ ankita indiresha

ಉದ್ಧವನು ಯಮುನೆಗೆ ಪೋಗುವಾಗಗದ್ದಲವ ಕೇಳಿದನು ಗೋಪನಾರಿಯರ ಪ

ಎದ್ದು ಗೋಪಿಯರೆಲ್ಲ ಮುದ್ದು ಮುಖವನೆ ತೊಳೆದುತಿದ್ದಿ ತಿಲ್ಕವನಿಟ್ಟು ಬಾಲ್ಯದಲ್ಲೆಶ್ರದ್ಧೆಪೂರ್ವಕ ಹರಿಯ ಪದ್ಮಂಗಳಿಗೆ ನಮಿಸಿಉದ್ಧಾರ ಮಾಡೆಂದು ಪ್ರಾರ್ಥಿಸಿದರು 1

ಅಂಗಳಕೆ ಥಳಿಹಾಕಿ ರಂಗವಾಲಿಯನಿಕ್ಕಿಮಂಗಳಾತ್ಮಕ ದೀಪ ಮನೆಯ ಮುಂದತೆಂಗುಬಾಳೆ ಸ್ತತ್ಥ ಫಲಂಗಳ್ಹೊಸ್ತಲಿಕಿಟ್ಟುರಂಗಗರ್ಪಿತವೆಂದು ನುಡಿದಲಾಗ 2

ಮಂದಗಮನಿಯರೆಲ್ಲ ಸುಂದರಾಂಬರವುಟ್ಟು ಚಂದ್ರಕುಪ್ಪಸಗಳನು ತೋಳಿಲಿಟ್ಟು ಛಂದಾದ ವಾಲೆ ಸರಪಣಿಯಾ ಕಿವಿಯಲಿಟ್ಟುಮಂದಹಾಶ್ಯದಿ ಮುಖದಿ ಮುಖರೆನಿಟ್ಟು3

ಕಾಲಿಕಾಲ್ಕಡ್ಗ ರುಳಿಯು ಘಾಲು ಪೈಝಣಕಾಲುಂಗ್ರಗಳು ಪಿಲ್ಲೆ ಕಾಲಿನಲ್ಲೆಸಾಲುಗೆಜ್ಜೆಗಳುಳ್ಳ ಮೇಲೆ ಕಾಂಚಿಯನುಟ್ಟುಮುಕ್ತಮಾಲೆಗಳು ಕೊರಳಲ್ಲೆ ಲೋಲಪದಕ 4

ಕಂಕಣವು ಕರದಲ್ಲಿ ವಂಕಿ ತಾಯಿತ ಭುಜದಿಬಿಂಕದಿಂದಲೆ ಮಂಲಿ ಹೆರಳ್ಹಾಕಿಅಂಕೆಯಿಲ್ಲದ ಸರ್ವಲಂಕಾರಗಳನಿಟ್ಟುಪಂಕಜಾಕ್ಷನ ಮನದಿ ಸ್ಮರಿಸಿದ 5

ಲೋಲಾಕ್ಷಿ ಗೋಪಿಯರು ಭಾಳ ವಸ್ತ್ರಗಳಿಟ್ಟುಲೋಲ ಲತೆಯಂತೆ ಬಳುಕಾಡುತಮಾಲೆ ಹೆಗಲ್ಹಾಡುತಿರೆ ಮೇಲೆ ಸ್ವರಗಳನೆತ್ತಿನೀಲವರ್ಣನ ಮಹಿಮಿ ಪಾಡಿದರು 6

ಬಂಗಾರದ ತಬಕಿನಲಿ ಮಂಗಳಾರುತಿಯೆತ್ತಿಶೃಂಗಾರ ಪದಗಳನೆ ಪಾಡುತಲೆರಂಗು ನೀಲದ ರತ್ನದುಂಗುರವು ಬೆರಳಲ್ಲೆರಂಗಗಾರತಿ ಬೆಳಗಿ ಬೇಡಿದರು 7

ಮಸರನೆಲ್ಲವನಾಕಿ ಹೊಸ ಪಾತ್ರೆಯಲಿ ಮಂತಹೊಸದು ಹಗ್ಗವ ಕಟ್ಟಿ ಕಡಿಯುವಾಗಶಶಿಮುಖೀಯರೆಲ್ಲ ಕುಸುಮನಾಭನ ಚರಿತೆಉಸುರುತಲೆ ಕಂದರ್ಪ ಶರಾದರತಿ 8

ಘಿಲ್ಲು ಘಿಲುಕೆಂದು ಮೈಯ್ಯಲ್ಲಿ ವಸ್ತ್ರದ ಶಬ್ದಪುಲ್ಲಾಕ್ಷಿಯರು ಕಡಿದ ಮಥನ ಶಬ್ದನಲ್ಲೆರ್ಹಾಡುವ ಕಂಠದಲ್ಲೆ ಗಾಯನದ ಶಬ್ದಎಲ್ಲ ಶಬ್ದವು ಸ್ವರ್ಗ 9

ನಿಂತು ನಿಜಕರದಿಂದ ಮಂತಧಾಮವ ಪಿಡಿದುಕಂತುಪಿತ ಕೃಷ್ಣನ್ನ ಪಾಡುತಲೆಕಾಂತೆರೆಲ್ಲರು ಮಸರು ಕಡೆವ ಶಬ್ದವ ಕೇಳಿಭ್ರಾಂತಿಯಲಿ ಉದ್ಧವನು ನಿಂತನಲ್ಲೆ 10

ಅವರ ಭಕುತಿಯ ನೋಡಿ ಅನುದಿನದಿ ಉದ್ಧವನುಅವರ ಪಾದದ ಧೂಳಿ ಸ್ವೀಕರಿಸಿದಅವರರುಹದೊಳಗೆನ್ನ ಆಗಲುದಯವು ಎಂದಅವರೊಳಗೆ ಅವರಂತೆ ಅನುಕರಿಸಿದ 11

ಇಂಥ ಪರಿಯಲಿ ಗೋಪಕಾಂತೆ ಕಾಲಾಪಗಳುನಿಂತು ನೋಡುತ ತನ್ನ ಮೈಯ್ಯ ಮುರಿದಭ್ರಾಂತನಾಗುತಲೆ ಅವರಂತೆ ಮಥನವ ಮಾಡಿಅವರಂತೆ ಕರಗಳ ಮಾಡಿ ನಲಿದು ಕುಣಿವ 12

ಎರಡು ಸಾಲಲಿ ದೀಪ ಕರಗಳಂಬಾರಗಳುತುರವು ತರಿಸುವ ದನಿಯು ಮಥನ ಶಬ್ದಸರಸಿಜಾಕ್ಷಿಯರೆಲ್ಲ ಗಾಯನ ಮಾಡುವ ಶಬ್ದಬೆರಗಾಗಿ ಕೇಳಿದನು ಪರಿಹರುಷದಿ 13

ಕುಂದ ಮಲ್ಲಿಗೆ ಜಾಜಿ ಪಾರಿಜಾತಾಂಬುಜವುಮಂದಾರ ಮರವು ಕೇತಕಿ ಬಕುಳವುನಂಧವರ್ತಾದಿ ಸುಮದಿಂದವೆರಡು ಸಾಲುಮಂದಿರದ ಮಂದ ಸುಗಂಧಡಗಿತು 14

ಸರಸಿಜಾಕ್ಷಿಯರೆಲ್ಲ ಪರಮಪುರುಷನ ಸ್ಮರಿಸಿಸುರಿಸುತಲಿ ಕಣ್ಣೀರು ಪರವಶದಲೇನೆರಗು ಬೀಳಲು ಹೊರದೆ ಹೆರಳ ಮಾಲೆಯ ಮರೆದುಬರೆದ ಚಿತ್ರಗಳಂತೆ ಪರಿಯಾದರು 15

ವಾರಿಜಾಕ್ಷಿಯರ್ಹರಿಯ ಧ್ಯಾನಮನದಲಿ ಕೃಷ್ಣಸಾರ ಸುಂದರ ಮೂರ್ತಿಯಳೆ ಕಾಣುತಮದ ಜಾನಕನ ಮಾತನಾಡುತ ಮನದಿಪಾರುಗಾಣದೆ ಸುಖದ ವಾರಿಧಿಯೊಳು 16

ಮನೆಯ ಹಂಬಲವಿಲ್ಲ ಮಾವನಂಕೆಯಿಲ್ಲಮೊದಲೆಯಿಲ್ಲ ಅತ್ತಿ ಪತಿಗಳಂಜಿಕೆಮಾರಜನಕನ ಕೂಡ ಮೈಯ್ಯಕೈಯನ ಮುರಿದುಮಾಧವನೆ ಪಾಲಿಸೆಂದೊದರಿದಾರು 17

ಮಂದಜಾಕ್ಷರು ಮಾಳ್ಪ ನಂದಬಾಲನ ಕಥೆಯಆನಂದದಲಿ ಕೇಳಿ ಉದ್ಧವನುಇಂದಿರೇಶನ ಚರಣ ದ್ವಂದ್ವ ಸ್ಮರಿಸುತಮಧುರೆಲ್ಹಿಂದ ಬಂದ್ಹೇಳಿದನು ನಂದಸುತಗೆ 18
**********