..
ನಿನ್ನ ನಂಬಿರುವೆ ಪ್ರಸನ್ನನಾಗು ಬ್ಯಾಗಚನ್ನಿಗವರದ ವಿಜಯರಾಯ ಪ
ಮನ್ನಿಸಿ ಎನ್ನ ಪಾವನ್ನ ನೀ ಮಾಡದಿರೆಬೆನ್ನ ಬಿಡೆನೊ ನಿನ್ನ ಜೀಯಾ ಅ.ಪ.
ಕರುಣಸಾಗರನೆಂಬೊ ಬಿರಿದು ನಿನಗಿಹುದೆಂದುಹಿರಿಯರಿಂದರಿತಿರುವೆ ಜೀಯಾ ||ಮರೆಯದೇ ಪೊರೆ ನಿನ್ನ ಚರಣಭಜಕನೆಂದುಸರುವ ಅಘವನು ಕ್ಷಮಿಸಿ ರಾಯಾ ||ದುರುಳ ವಿಷಯಕ್ಕಿಳಿವ ಮರುಳ ಮನವನ್ನು ನಿನ್ನಚರಣದಲಿ ನಿಲಿಸಿನ್ನು ಜೀಯಾ ರಾಯಾ 1
ಅರಿಯೆ ವಿಧಿ ಜಪ ತಪವ ಅರಿಯೆ ಹೋಮ ನೇಮಅರಿಯೆ ಮಂತ್ರ ಸ್ತೋತ್ರವ ||ಬರಿದೆ ಧರಿಯೊಳು ತಿರುಗಿ ಹರಿಯ ಸ್ಮರಿಸದೆ ದಿನವಇರುಳು ಹಗಲು ಕಳದೆನು ||ಕರುಣವಿಲ್ಲವ್ಯಾಕೆ ಶರಣಾಗತನ ಇನ್ನುಪೊರೆಯದೇ ಬಿಡುವದು ಥರವಲ್ಲವೆಂದಿಗೂ 2
ಅಜ ಭವರಿಂದೊಂದ್ಯನಾದ್ವಿಜಯ ಮೋಹನ ವಿಠಲಭಜಕರಿಗೊಲಿದಂತೆ ಉಪಾಯ ||ನಿಜವಾಗಿ ಮಾಡದಿರೆ ಬಿರುದಿಗೆ ಕುಂದುಗಜರಾಜವರದನ ಪ್ರಿಯಾ ||ಕುಜನರ ಮತ ಬಡಿದು ವಿಜಯ ವಿಠಲನೇ ಪರನೆಂದುತ್ರಿಜಗದೊಳು ಮೆರಸಿದ ಭಜಕಾಗ್ರೇಸರ ಗುರುವೆ 3
***
ninna naMbiruve prasannanAgu byAgacannigavarada vijayarAya ||pa||
mannisi enna pAvanna nI mADadirebenna biDeno ninna jIyA ||a.pa||
.
karuNasAgaraneMbo biridu ninagihudeMduhiriyarindaritiruve jIyA ||
mareyadE pore ninna charaNaBajakaneMdusaruva aGavanu kShamisi rAyA ||
duruLa viShayakkiLiva maruLa manavannu ninnacaraNadali nilisinnu jIyA rAyA ||1||
ariye vidhi japa tapava ariye hOma nEma^^ariye mantra stOtrava ||
baride dhariyoLu tirugi hariya smarisade dinava^^iruLu hagalu kaLadenu ||
karuNavillavyAke SaraNAgatana innuporeyadE biDuvadu tharavallaveMdigU ||2||
aja BavarindondyanAdvijaya mOhana viThalaBajakarigolidante upAya ||
nijavAgi mADadire birudige kundugajarAjavaradana priyA ||
kujanara mata baDidu vijaya viThalanE paranendutrijagadoLu merasida BajakAgrEsara guruve ||3||
***
check
ನಿನ್ನ ನಂಬಿರುವೆ ಪ್ರಸನ್ನನಾಗು
ಬ್ಯಾಗಚನ್ನಿಗವರದ ವಿಜಯರಾಯ ||pa||
ಮನ್ನಿಸಿ ಎನ್ನ ಪಾವನ್ನ ನೀ
ಮಾಡದಿರೆಬೆನ್ನ ಬಿಡೆನೊ ನಿನ್ನ ಜೀಯಾ ||a.pa||
.
ಕರುಣಸಾಗರನೆಂಬೊ ಬಿರಿದು
ನಿನಗಿಹುದೆಂದುಹಿರಿಯರಿಂದರಿತಿರುವೆ ಜೀಯಾ ||
ಮರೆಯದೇ ಪೊರೆ ನಿನ್ನ
ಚರಣಭಜಕನೆಂದುಸರುವ ಅಘವನು ಕ್ಷಮಿಸಿ ರಾಯಾ ||
ದುರುಳ ವಿಷಯಕ್ಕಿಳಿವ ಮರುಳ
ಮನವನ್ನು ನಿನ್ನಚರಣದಲಿ ನಿಲಿಸಿನ್ನು ಜೀಯಾ ರಾಯಾ ||1||
ಅರಿಯೆ ವಿಧಿ ಜಪ ತಪವ ಅರಿಯೆ
ಹೋಮ ನೇಮಅರಿಯೆ ಮಂತ್ರ ಸ್ತೋತ್ರವ ||
ಬರಿದೆ ಧರಿಯೊಳು ತಿರುಗಿ ಹರಿಯ ಸ್ಮರಿಸದೆ
ದಿನವಇರುಳು ಹಗಲು ಕಳದೆನು ||
ಕರುಣವಿಲ್ಲವ್ಯಾಕೆ ಶರಣಾಗತನ
ಇನ್ನುಪೊರೆಯದೇ ಬಿಡುವದು ಥರವಲ್ಲವೆಂದಿಗೂ ||2||
ಅಜ ಭವರಿಂದೊಂದ್ಯನಾದ್ವಿಜಯ
ಮೋಹನ ವಿಠಲಭಜಕರಿಗೊಲಿದಂತೆ ಉಪಾಯ ||
ನಿಜವಾಗಿ ಮಾಡದಿರೆ ಬಿರುದಿಗೆ
ಕುಂದುಗಜರಾಜವರದನ ಪ್ರಿಯಾ ||
ಕುಜನರ ಮತ ಬಡಿದು ವಿಜಯ ವಿಠಲನೇ
ಪರನೆಂದುತ್ರಿಜಗದೊಳು
ಮೆರಸಿದ ಭಜಕಾಗ್ರೇಸರ ಗುರುವೆ ||3||
*******