..
ಇಂದು ಪವಮಾನ ಪಿಡಿಎನ್ನಕೈಯಾ ನಿನ್ನ ನಾ
ಪೊಂದಿ ಪ್ರಾರ್ಥಪೆನಯ್ಯಾ ಪ.
ಬಂಧನದೊಳು ನೊಂದೆನಯ್ಯ
ಮುಂದೆ ಸನ್ಮಾರ್ಗತೋರಿಸು ಜೀಯಾ | ಎನ್ನ
ಕುಂದುಗಳೆಣಿಸದಿರಯ್ಯಾ ಗುರು
ಗಂಧವಾಹನ ವಜ್ರಕಾಯಾ ಅ.ಪ
ನಾನು ನನ್ನದು ಎಂಬ ಮದ ಬಿಡಿಸೊ
ಜ್ಞಾನ ಭಕ್ತಿ ವಿರಕ್ತಿ ಕೊಡಿಸೊ
ಜಾನಕಿಪತಿ ಪದದಿ ಮನ ನಿಲಿಸೊ
ಸಾನುರಾಗದಿ ಸತತ ಉದ್ಧರಿಸೊ 1
ನಿನ್ನ ದಯದಿಂ ರವಿಜ ಭಯ ಕಳೆದಾ
ನಿನ್ನ ವಲಿಮೆಲಿ ಪಾರ್ಥ ಜಯ ಪಡೆದಾ
ನಿನ್ನ ನಂಬದೆ ರಾವಣನು ತಾ ಮಡಿದಾ2
ಶ್ರೀಮದಾನಂದತೀರ್ಥ ಮಧ್ವೇಶಾ
ಶಾಮಸುಂದರ ಸ್ವಾಮಿ ನಿಜದಾಸಾ
ಕಾವಿತಾರ್ಥಗಳಿತ್ತು ಪೊರೆ ಅನಿ ಶಾ 3
***