Showing posts with label ಶಕ್ತನಾದರೆ ನಂಟರೆಲ್ಲ ಹಿತರು purandara vittala. Show all posts
Showing posts with label ಶಕ್ತನಾದರೆ ನಂಟರೆಲ್ಲ ಹಿತರು purandara vittala. Show all posts

Friday, 6 December 2019

ಶಕ್ತನಾದರೆ ನಂಟರೆಲ್ಲ ಹಿತರು purandara vittala

ಪುರಂದರದಾಸರು
ರಾಗ ಕಾಂಭೋಜ ಝಂಪೆ ತಾಳ

ಶಕ್ತನಾದರೆ ನೆಂಟರಲ್ಲ ಹಿತರು ||ಪ ||
ಅಶಕ್ತನಾದರೆ ಅವರೆ ವೈರಿಗಳು ಲೋಕದಲಿ ||ಅ ||

ಕಮಲಾರ್ಕನಲಿರುವ ಕಡು ನೆಂಟತನದಿಂದ
ವಿಮಲ ಜಲದೊಳಗೆ ಓಡಾಡುತಿಹುದು
ಕ್ರಮಗೆಟ್ಟು ನೀರಿಂದ ತಡಿಗೆ ಬೀಳಲು ರವಿಯ
ಅಮಿತ ಕಿರಣಗಳಿಂದ ಕಂದಿ ಹೋಗುವುದು ||

ವನ ಸುತ್ತಿ ಸುಡುವಾಗ ವಾಯು ಬೀಸಲು ಉರಿಯು
ಘನ ಪ್ರಜ್ವಲಿಸುತಿಹುದು ಗಗನಕಡರಿ
ಮನೆಯೊಳಿಹ ದೀಪಕ್ಕೆ ಮಾರುತನು ಸೋಂಕಿದರು
ಘನ ಶಕ್ತಿಯುಡುಗಿ ತಾ ನಂದಿಹೋಗುವುದು ||

ಕರಿಯ ಕಾಯಿದ ಹರಿಯ ಕರುಣ ತಪ್ಪಿದ ಮೇಲೆ
ಮರೆಯ ಹೊಕ್ಕರು ಕಾಯ್ವ ಮಹಿತರಾರಯ್ಯ
ವರದ ಶ್ರೀ ಪುರಂದರವಿಠಲನು ಒಲಿದಿರಲು
ಸರ್ವ ಜನರೆಲ್ಲ ಮೂಜಗದಿ ಹಿತರು ||

( ಇನ್ನೊಂದು ಆವೃತ್ತಿಯಲ್ಲಿ ಕಡೆಯ ನಾಲ್ಕು ಸಾಲುಗಳು ಹೀಗಿವೆ

ವರದ ಶ್ರೀ ಪುರಂದರವಿಠಲನು ಒಲಿದಿರಲು
ಸರ್ವ ಜನರೆಲ್ಲ ಮೂಜಗದಿ ಹಿತರು
ಕರಿಯ ಕಾಯಿದ ಹರಿಯ ಕರುಣ ತಪ್ಪಿದ ಮೇಲೆ
ಮೊರೆಯ ಹೊಕ್ಕರು ಕಾಯ್ವ ಮಹಿತರಾರಯ್ಯ ||
***

pallavi

shaktanAdare neNTaralla hitaru

anupallavi

ashaktanAdare avare vairigaLu lOgadali

caraNam 1

kamala arkanaliruva kaDu neNTatanadinda vimala jaladoLage Adutihudu
krama geTTu nIrinda taDige bILalu raviya amita kiraNagaLinda kandi hOguvudu

caraNam 2

vana sutti suDuvAga vAyu bIsalu uriyu ghana praj-jvalisutihudu gaganakaDari
maneyoLiha dIpakke mArutanu sOnkidaru ghana shaktiyuDugi tA nandihOguvudu

caraNam 3

kariya kAyida hariya karuNa tappida mEle mareya hokkaru kAiva mahitarArayya
varada shrI purandara viTTalanu olidiralu saruva janarella mUjgadi hitaru
***

ಶಕ್ತನಾದರೆ ನಂಟರೆಲ್ಲ ಹಿತರು ಅಶಕ್ತನಾದರೆ ಆಪ್ತರವರೆ ವೈರಿಗಳು ಪ.

ಕಮಲಾರ್ಕರಿಗೆ ನಿರುತ ಕಡುನಂಟುತನವಿರಲುಕಮಲ ತಾ ಜಲದೊಳಗೆ ಆಡುತಿಹುದುಕ್ರಮತಪ್ಪಿ ನೀರಿನಿಂದ ತಡಿಗೆ ಬೀಳಲು ರವಿಯಅಮಿತ ಕಿರಣಗಳಿಂದ ಕಂದಿ ಪೋಗುವುದು 1

ವನದೊಳುರಿ ಸುಡುತಿರಲು ವಾಯು ತಾ ಸೋಂಕಲ್ಕೆಘನ ಪ್ರಜ್ವಲಸುತಿಹುದು ಗಗನಕಡರಿಮನೆಯೊಳಿರ್ದಾ ದೀಪ ಮಾರುತನು ಸೋಂಕಿದರೆಘನಶಕ್ತಿ ತಪ್ಪಿ ತಾ ನಂದಿ ಹೋಗುವುದು 2

ವರದ ಶ್ರೀ ಪುರಂದರವಿಠಲನ ದಯವಿರಲುಸರುವ ಜನರೆಲ್ಲ ಮೂಜಗದಿ ಹಿತರುಕರಿಯ ಸಲುಹಿದ ಹರಿಯ ಕರುಣ ತಪ್ಪಿದ ಮೇಲೆಮೊರೆಹೊಕ್ಕರೂ ಕಾಯ್ವ ಮಹಿಮರುಂಟೇ ದೇವ 3
***********