Showing posts with label ಗಣಪತಿ ಸರಸ್ವತಿಯರು govinda. Show all posts
Showing posts with label ಗಣಪತಿ ಸರಸ್ವತಿಯರು govinda. Show all posts

Friday 8 November 2019

ಗಣಪತಿ ಸರಸ್ವತಿಯರು ankita govinda

ಗೋವಿಂದದಾಸ
ಗಣಪತಿ ಸರಸ್ವತಿಯರು
261ಶ್ರೀ ಗಣನಾಥನಿಗೆ | ಶಾರದಾಂಬಿಕೆಗೆಶ್ರೀ ಗೌರಿ ಭೂದೇವಿ ಶ್ರೀದೇವಿಗೆ |ಶ್ರೀಗುರುಮಹಾವಿಷ್ಣು ಬ್ರಹ್ಮರುದ್ರಾದ್ಯರಿಗೆಸಿರಿಚರಣ ಪಂಕಜಗೆ ನಮಿಸಿ ನುತಿಸುವೆನು 1

ಅಷ್ಟ ದಿಕ್ಪಾಲರಿಗೆ ಶಿಷ್ಯಮರುದ್ಗಣಗಳಿಗೆಅಷ್ಟವಸು ಸಪ್ತಋಷಿ ನವಗ್ರಹಾದ್ಯರಿಗೆ |ಶ್ರೇಷ್ಠ ಹನುಮಂತನಿಗೆ ಕನಕಾದಿ ದಾಸರಿಗೆಸೃಷ್ಟಿಯೊಳು ಕವಿಜನಕೆ ಕೈಮುಗಿವೆನು 2

ವಿಪ್ರಕುಲ ಸಂಜಾತ ಮಯ್ಯೂರ ಮಡಿಪುರದೊ-ಳಿಪ್ಪ ವೆಂಕಟರಾಯ ಗೋಳೇರ ಸುಕುಮಾರ |ಸರ್ಪಶಯನನ ದಾಸ ಗೋವಿಂದನೆಂಬವನುಜಲ್ವಿಸಿಯೆ ವಿರಚಿಸಿದೆನೀ ಕೃತಿಯನು 3

ಯತಿಗಣ ಪ್ರಾಸ ವಿಷಮಾಕ್ಷರಗಳೊಂದರಿಯೆಕೃತ ದೋಷ ರಾಗ ಲಯ ಭೇದವನು ತಿಳಿಯೆ |ಪೃಥುವಿಯೊಳು ಕವಿಗಳಂತಗ್ಗಳನು ನಾನಲ್ಲಅತಿಶಯದ ನ್ಯೂನತೆಯ ಬಲ್ಲ ಶ್ರೀನಲ್ಲ 4

ತಪ್ಪು ಸಾವಿರವಿರಲು ತಿದ್ದಿ ಬಲ್ಲವರಿದನುಒಪ್ಪುವಂದದಿ ಜಗದಿ | ಮೆರೆಸಿ ವಾಚಕರುಸರ್ಪಶಯನನ ಕೃಪೆಗೆ ಪಾತ್ರರಾಗುತ ನೀವುಕ್ಷಿಪ್ರದಲಿ ಗೋವಿಂದದಾಸ£À£Àು ಪರಸಿ ಮನ್ನಿಪುದು 5
*******