Showing posts with label ಯಾಕೆಲೊ ರಂಗ ನಿನಗಿಂತು ನಟನೆಯ ಮಾತು neleyadikeshava. Show all posts
Showing posts with label ಯಾಕೆಲೊ ರಂಗ ನಿನಗಿಂತು ನಟನೆಯ ಮಾತು neleyadikeshava. Show all posts

Wednesday, 1 September 2021

ಯಾಕೆಲೊ ರಂಗ ನಿನಗಿಂತು ನಟನೆಯ ಮಾತು ankita neleyadikeshava

..

ಯಾಕೆಲೊ ರಂಗ ನಿನಗಿಂತು ನಟನೆಯ ಮಾತು ಪ


ಮಾಕಾಂತ ಕರೆಸಿದರೆ ಬಾರದಿಹ ಪೊಗರುಅ


ಗೊಲ್ಲತನವಂ ಬಿಡಿಸಿ ಗೋಗಾವ ಡಿಂಬ್ಹರಿಸಿಉಳ್ಳ ತಸ್ಕರ ಬುದ್ಧಿ ಕಡೆಗೆ ಇರಿಸಿಬಾಲಕನ ವಂದರಿಸಿ ಬಹುಭಾಗ್ಯವಂತನೆನಿಸಿಎಲ್ಲರೊಳು ಸಲಿಗೆ ನಿಲಿಸಿದಳೊ ನಿಮ್ಮರಸಿ 1


ಕೆಸರ ಚೊಗೆಯಂ ಬಿಡಿಸಿ ಗುಂಜ ಸರವಂ ತೆಗೆಸಿಬಿಸರುಹ ಮಣಿಮಾಲೆ ಕಡೆಗೆ ಇಡಿಸಿಪೊಸ ಪೀತಾಂಬರ ಉಡಿಸಿ ನವರತ್ನವಂ ತೊಡಿಸಿವಸುಧೆಯೊಳು ಮಿಗಿಲಾಗಿ ನಿಲಿಸಿದಳೊ ನಮಿಸಿ 2


ಎನ್ನ ಮಾತನು ಕೇಳು ಮುನಿಸು ಕೃತ್ಯವ ಸೀಳುಇನ್ಯಾಕೆ ಯೋಚನೆ ಫಲವ ಪೇಳುಬಿನ್ನಹವನು ಕೇಳು ನೆರೆಗೂಡಿ ಸುಖಬಾಳುಚೆನ್ನ ಬಾಡದಾದಿಕೇಶವ ದಯಾಳು 3

***