ಕಾಖಂಡಕಿ ಶ್ರೀ ಕೃಷ್ಣದಾಸರು
ಬೆಳಿಯೋ ಬೆಳಿ ಮನವೇ ಬೆಳಿಕಂಡ್ಯಾ ಬೆಳಿ ಮನವೇ ಬೆಳಿ ನಿನ್ನ ಹೊಲವನು | ಇಳೆಯೊಳು ಯಣಿಗಾಣದ್ಹಾಂಗೆ 1
ಗುರುವಿನಭಯ ಕೊಂಡು ಸತ್ವದಾ ಹೊಲ ಹಿಡಿದು | ಜರಿದು ಸಂಗಿಗಳನ್ನೆಲ್ಲಾ 2
ವಿವೇಕವೇಯಂಬಾ ನೇಗಿಲ ಎಂಟು | ಭಾವವೆಂಬೆತ್ತುಗಳಿಂದ 3
ದೃಢಪಾಶದಿಂದಲಿ ಕಟ್ಟಿ ಯಚ್ಚರವೆಂಬಾ | ಒಡನೆ ಶಿಕ್ಷದಿ ನಡೆಸುತಾ 4
ಜ್ಞಾನ ಭಕ್ತಿ ವೈರಾಗ್ಯ ತಾಳದ ಬಲದಿ | ಅನನ್ಯ ಭಾವ ಕೂರಿಗೆಯಿಂದಾ 5
ಗುರು ಕರುಣ ಮಳೆ ಗರೆಯೆ ವೇದಾಂತ ಬೀಜ | ಭರದಿ ಬಿತ್ತಿ ನಾದುವಂತೆ 6
ಅನುಮಾನ ಕಸ ತೆಗೆದು ಬೋಧವ ಯಡಿಹಾಯ್ದು| ಧನಗಾಳ ತುಂಬಿಡುವಂತೆ 7
ವರಕ್ಷೋಭ ಯಂಬಾ ನುಡಿ ಹಕ್ಕಿ ಬರಗುಡದೆ | ಪರಮ ಜಾಗೃತಿಯ ಕವಣಿಯಿಂದಾ 8
ಬೇರೆ ಬೇರೆ ದೋರ್ವುದೆಲ್ಲಾ ವಬ್ಬುಳಿ ಮಾಡಿ | ಸಾರಿಹ ಶೃತಿ ವಾಕ್ಯದಿಂದ 9
ದೋರುವಾ ದೃಶ್ಯ ಹೆಕ್ಕಲ ಬಿಟ್ಟು ವಳಗಿರುವ | ತೂರಿ ಅಹಂಭಾವ ಹೊಟ್ಟವನು 10
ದೈನ್ಯವನು ಹಿಂಗಿ ಬಳಕೊಂಡು ಅನ್ಯರಾ ಮರೆ ಹೋಗದಂತೆ 11
ಪರಿಪೂರ್ಣಾದ ಬಳಿಕ ಒಕ್ಕಲು ತನಕ | ಮರುಳೆ ನೀ ಸಿಕ್ಕದಿರು ಕಂಡ್ಯಾ 12
ಸಂಚಿತ ಸರ್ವ ಬಿಡಿಸಿಕೊ ಸುತ ಪ್ರಭು ಗುರು ಮಹಿಪತಿ ವಲುಮೆಯಿಂದಾ 13
***