Showing posts with label ಅಭಯ ಪ್ರಧಾನ ಮಾಡೂ ಇಭಗಿರಿವಾಸ ankita gopalakrishna vittala ABHAYA PRADHAANA MAADOO IBHAGIRIVAASA. Show all posts
Showing posts with label ಅಭಯ ಪ್ರಧಾನ ಮಾಡೂ ಇಭಗಿರಿವಾಸ ankita gopalakrishna vittala ABHAYA PRADHAANA MAADOO IBHAGIRIVAASA. Show all posts

Wednesday, 1 December 2021

ಅಭಯ ಪ್ರಧಾನ ಮಾಡೂ ಇಭಗಿರಿವಾಸ ankita gopalakrishna vittala ABHAYA PRADHAANA MAADOO IBHAGIRIVAASA



ಭಯ ಪ್ರಧಾನ ಮಾಡೂ ಇಭಗಿರಿವಾಸ ಪ.

ಮಂಗಳ ಮಹಿಮನೇ ರಂಗನಾಥನೆ ಕೃಷ್ಣಾ

ತುಂಗ ವಿಕ್ರಮ ನರಸಿಂಗ ಲಕ್ಷ್ಮೀಕಾಂತ 1


ಮೃತ್ಯು ಬೆನ್ಹತ್ತಿರೆ ಕತ್ತರಿಸುವ ಮಹ

ಶಕ್ತ ನೀನಿರುತಿರೆ ಮತ್ತಾರ ಬೇಡಲಿ 2


ನಿನ್ನ ಕಿಂಕರಳಾಗಿ ನಿನ್ನ ಸೇವೆಯ ಮಾಳ್ಪ

ಉನ್ನಂತ ಅಭಿಲಾಷೆಯನ್ನು ಸಲ್ಲಿಸು ದೇವ 3


ಹಿಂದಿನ ಎಡರುಗಳೊಂದೊಂದರಲಿ ಕಾಯ್ದೆ

ಇಂದು ಮುಂದೂ ಕಾಯೋ ಮಂದಹಾಸನೆ ಸ್ವಾಮಿ 4


ಹರಿಗುರು ಕಾರ್ಯಕಲ್ಲವೆ ಎನ್ನ ಈ ದೇಹಾ

ಸಿರಿವರ ಗೋಪಾಲಕೃಷ್ಣವಿಠ್ಠಲ ಸ್ವಾಮಿ 5

***


ಗೋಪಾಲ ಕೃಷ್ಣ ವಿಠ್ಠಲ ಅಂಕಿತದ ಅಂಬಾಬಾಯಿ ಅವರ ರಚನೆ 

ಅಭಯ ಪ್ರಧಾನ ಮಾಡೂ ಇಭಗಿರಿವಾಸ

 ಪ.

ಮಂಗಳ ಮಹಿಮನೇ ರಂಗನಾಥನೆ ಕೃಷ್ಣಾ

ತುಂಗ ವಿಕ್ರಮ ನರಸಿಂಗ ಲಕ್ಷ್ಮೀಕಾಂತ 

1

ಮೃತ್ಯು ಬೆನ್ಹತ್ತಿರೆ ಕತ್ತರಿಸುವ ಮಹ

ಶಕ್ತ ನೀನಿರುತಿರೆ ಮತ್ತಾರ ಬೇಡಲಿ 

2

ನಿನ್ನ ಕಿಂಕರಳಾಗಿ ನಿನ್ನ ಸೇವೆಯ ಮಾಳ್ಪ

ಉನ್ನಂತ ಅಭಿಲಾಷೆಯನ್ನು ಸಲ್ಲಿಸು ದೇವ 

3

ಹಿಂದಿನ ಎಡರುಗಳೊಂದೊಂದರಲಿ ಕಾಯ್ದೆ

ಇಂದು ಮುಂದೂ ಕಾಯೋ ಮಂದಹಾಸನೆ ಸ್ವಾಮಿ 

4

ಹರಿಗುರು ಕಾರ್ಯಕಲ್ಲವೆ ಎನ್ನ ಈ ದೇಹಾ

ಸಿರಿವರ ಗೋಪಾಲಕೃಷ್ಣವಿಠ್ಠಲ ಸ್ವಾಮಿ 

5

***