ರಾಗ ; ಶ್ರೀರಂಜನಿ ಆದಿತಾಳ
ಶ್ರೀ ಪ್ರಾಣೇಶದಾಸಾರ್ಯ ವಿರಚಿತ "ತಿಥಿತ್ರಯ ನಿರ್ಣಯ"
ಅಂಧಂತಮಸೆ ಪ್ರಾಪ್ತಿ ನಿಶ್ಚಯ ಶೃತಿ-
ಯಂದ ಪ್ರಕಾರವಾಚರಿಸದವರಿಗೆ॥ಪ॥
ಹರಿದಿನದಲಿ ಆಹಾರ ಬಿಟ್ಟು ಮುದದಿ ಜಾ-
ಗರವ ಮಾಡದಲುಂಡು ವರಗೂವಧಮಗೇ॥೧॥
ಹರಿವಾಸರ ವಿನಹಾ ಸರುವ ದ್ವಾದಶಿ ಪಾರ-
ಣಿ ರವಿಯೋದಯಕಾಗದಿರುವ ದುರ್ಮತಿಗೇ॥೨॥
ನಾಲ್ವತ್ತೈದು ಘಟಿ ಮ್ಯಾಲೇಕಾದಶಿಯಾಗೆ
ಶ್ರೀಲೋಲವಾಸರಾರೇಳು ಕಳವಂಗೇ॥೩॥
ಪ್ರಥಮ ಕಾಲವ ಮೀರೆಚ್ಯುತನ ಪ್ರಸಾದವ
ಪ್ರತಿ ದ್ವಾದಶಿಯೊಳುಂಬ ಮತಿಗೇಡಿಗಳಿಗೇ॥೪॥
ದಶಪಂಚ ಮ್ಯಾಲೊಂದು ದಶಮಿ ಸಿದ್ಧಾಂತ ವೋ-
ದಿಸಲು ಶ್ರೀವರನ ದಿವಸ ಹಿಂದಾಗುವಗೇ॥೫॥
ವೇಧಿಲ್ಲಾ ದಶಮಿಗೆ ದ್ವಾದಶಿ ಪರದಿನ
ಖ್ಹೋದರೆ ದ್ವಯ ನಿರ್ಜಲಾವೆನ್ನದೀರೆ॥೬॥
ಪಳಾಧಿಕೈವತ್ತೇಳು ಘಳಿಗಿ ದ್ವಾದಶಿ ವೋದಿ-
ಸಲು ಸಾಧನಿದು ಎಂದು ತಿಳಿಯದವನಿಗೆ॥೭॥
ದಶಮಿಯೊಳ್ ಹತ್ತು ದ್ವಾದಶಿಯೊಳೆಂಟು ಬಿಡಾದೆ
ಪಶುವಿನಂದದಿ ಬಲು ಹಸಗೆಟ್ಟವನಿಗೇ॥೮॥
ಎಲ್ಲಾರು ಸಂದೇಹ ಉಳ್ಳಾರೆ ಮರುದಿನ-
ದಲ್ಲೆ ದಶಮಿ ಮಾಡದೊಲ್ಲದಿದ್ದವಗೇ॥೯॥
ಅತಿ ಸಾಧನಿರಲು ಆಹುತಿಯನ್ನು ಬಹು ಪೋಷಿ-
ಸುತ ಪಾರಣಿಗೆ ಹೊತ್ತು ವೃಥ ಕಳವವಗೆ॥೧೦॥
ಅನಿವಾರ್ಯ ಬರಲು ಸಾಧನಿಗೆ ತೀರ್ಥವ ಕೊಂಡು
ಅನುಮಾನ ಮ್ಯಾಲೆ ಭೋಜನಕೆ ಮಾಡುವಗೇ॥೧೧॥
ಮಂಕುಬುದ್ಧಿಯಲಿಂದ ಸಂಕಟಿಲ್ಲದೆ ತೀರ್ಥ-
ಮಂ ಕೊಂಡು ಸಾಧನಿಯಂಕ ತೋರುವಗೇ॥೧೨॥
ಸತಿಗೆ ಶ್ರಾದ್ಧವ ಮಾಳ್ಪ ಸುತಗೊಡಿಯನ ಸೇವೆ
ರತಿಗೆ ಸಂಕಟವೆನ್ನದತಿ ಮೂಢ ನರಗೇ॥೧೩॥
ಈರಾರು ದಿನ ಹದಿಮೂರು ಘಳಿಗಿ ವಿಷ್ಣು
ತಾರವಿದ್ದರೆ ನೀರಾಹಾರ ಮಾಡದಿರೆ॥೧೪॥
ದ್ವಯ ಪಕ್ವದಲಿ ತಿಥಿತ್ರಯ ಸಮನಾಗೇವೆ
ಭಯಹಾರ ವೃತವೆನ್ನದವಿವೇಕಿಗಳೀಗೇ॥೧೫॥
ತಿಥಿತ್ರಯದಲಿ ಮಾತು ಪಿತು ಸ್ವರ್ಗವೈದಾಲು
ರತಿ ಇಂದೋಪನ ವಾಹ ಪತಿತ ಮಾನವಗೇ॥೧೬॥
ಅನಳಗಾಹುತಿ ಶ್ರಾದ್ಧ ಅನಿಮಿಷಾದ್ಯರಿಗೆ ತ-
ರ್ಪಣ ಕೃಷ್ಣಾಷ್ಟಮಿ ಹರಿದಿನದಿ ಮಾಡುವಗೇ॥೧೭॥
ಸಮೀರ ಮತಸ್ಥಾನು ಅಮರ ಲೋಕ್ಯೈಯದಾರೆ
ವಿಮಸ್ಥನಿಂದಲಾ ಕ್ರಮವ ಮಾಡಿಸಿದರೆ॥೧೮॥
ದಶಮಿ ಶಿವನಿಸಿ ದ್ವಾದಶಿ ಸಾಧನಿ ಶ್ರಾದ್ಧ ಸಂ-
ಧಿಸಿದರೆ ವಿಷ್ಣೋಪವಾಸ ಎಸಗುವವನಿಗೆ॥೧೯॥
ಅನಿರುದ್ಧಗರ್ಪಿಸಿ ಅನುದಿನದಲ್ಲಿ ಪ್ರಾ-
ಣನಿಗರ್ಪಿಸದಲುಂಬ ಮನುಜಾಧರಿಗೇ॥೨೦॥
ಪ್ರಾಣೇಶವಿಠಲಾನ ಧ್ಯಾನದೊಳಿರುತಿಪ್ಪ
ಪ್ರಾಣದೇವರ ಉಕ್ತಿಯಾ ನಂಬದವಗೇ॥೨೧॥
***
andhantamasa prapti niscaya srutiyinda
prakara vacharisadavarige || pa ||
haridinadalli aharabittu mudadi
jagarava madadalundu varaguvadhamage || 1 ||
harivasara vinaha saruva dvadasa
paraniraviyudayakagadiruva durmatige || 2 ||
nalvattaidu gati myalekasadasiyage
srilola vyasararelu kalevange || 3 ||
prathamakalava miryacyutana prasadava
pratidvadasiyolumba matigedigalige || 4 ||
dasapancha myalondu dasamisiddhantavodisalu
srivarana divasa hindaguvage || 5 ||
vedhilla dasamige dvadasi paradina
kkodare dvaya nirjaladavennadire || 6 ||
paladhikaivattelu galige dvadasi udisalu
sadhanidu endu tiliyadavanige || 7 ||
dasamiyol hattu dvadasiyolentu
bidade pasuvinamdadi balu hasagettavanige || 8 ||
ellaru sandeha ullare marudinadalle
dasami madadolladiddavage || 9 ||
atisadhaniralu ahutiyanu bahu
poshisuta paranege hottu vrutha kalevanige ||10 ||
anivarya baralu sadhanege tirthava
kondu anumana myale bojanake maduvage || 11 ||
mankubuddhiyalinda sankatillade tirtha
mam komdu sadhaniyanka toruvavage || 12 ||
satige sraddhava malpa sutagodiyana seve
ratage sankatavennadati mudhanarage || 13 ||
iraru dina hadimuru galige vishnu
taraviddare nirahara madadire || 14 ||
dvayapakshadali matrupitrusvargavaidalu
ratiyindopavasavratapatita manavage || 15 ||
analagahutin sraddha animishadyarige tarpana
krushnashtami haridinadi maduvage || 17 ||
samiramatasthanu amaralokaidiralu
vimatasthanindala kramava madisidare || 18 ||
dhasami sivaniki dvadasi sadhani sraddha sandhisire
vishnupavasa esaguvavanige || 19 ||
aniruddhanigarpisi anudinadalli
prananigarpisadalumba manujadhamarige || 20 ||
pranesavithalana dhyanadolirutippa
pranadevara uktiya nambadavage || 21 ||
***
ಶ್ರೀ ಪ್ರಾಣೇಶದಾಸರ ಉಗಾಭೋಗ
ತಿಥಿತ್ರಯದಲ್ಲಿ ವರ್ಜ್ಯಪದಾರ್ಥಗಳ ವಿವರ
ಪುನಹ ಭೋಜನ ಕಾಂಶ ಹಾರಕ
ಚಣಕ ಉದ್ದಲ ಸಂಧಿ ಮಧು ಮೈ-
ಥುನ ಪರಾನ್ನವು ಶಾಖ ಈ ದಶ ವರ್ಜ್ಯ ದಶಮಿಯಲೀ
ದಿನದಿ ನಿದ್ರಿ ಕದಳಿ ಮಧು ದ್ವಿಭೋ-
ಜನ ಸ್ತ್ರೀ ತೈಲುದಕಾಂಶ ಈ ಎಂ-
ಟನು ಬಿಡಲು ದ್ವಾದಶಿಗೆ ಪ್ರಾಣೇಶವಿಠಲ ಮೆಚ್ಚುವನೂ
****