..
ಮಣಿಗಣ ಭೂಷಣ ಅಣಿಗಾಣೆನಿಮಗಿನ್ನು ಗಣರಾಯ ಗಣರಾಯ ಪ.
ರುದ್ರ ಕುಮಾರನೆ ಸಿದ್ಧಿ ನಿನಾಯಕ ವಿದ್ಯವಪಾಲಿಸೊಬುದ್ಧಿದಾತನೆ ಅ.ಪ.
ಆನೆಯ ಮುಖದವನ ಧೇನಿಸಿನಮಿಸುವೆ ಗಣರಾಯ1
ಶ್ರೀನಿವಾಸನ ಪ್ರಿಯ ನೀನಮ್ಮಗೆಲಿಸೆಂದು ಗಣರಾಯ2
ಹಸ್ತಿಯ ಮುಖದವಗೆ ಹಸ್ತವ ಮುಗಿದೆವಸ್ವಸ್ಥ ಮನಸು ಕೊಡು ವಿಸ್ತರ ಉದರನೆ ಗಣರಾಯ3
ಗಂಧ ಅಕ್ಷತೆ ಪುಷ್ಪ ತಂದೆ ದುರ್ವಾಂಕುರ ಚಂದದ ವಸ್ತ್ರಗಳ ಒಂದೊಂದು ಕೈಕೊಳ್ಳೊ ಗಣರಾಯ 4
ರನ್ನ ಮಾಣಿಕ ಬಿಗಿದ ಚಿನ್ನದಾಭರಣವ ನಿನ್ನ ಪೂಜೆಗೆ ತಂದೆ ಚೆನ್ನಾಗಿ ಕೈಕೊಳ್ಳೊ ಗಣರಾಯ 5
ಚಕ್ಕಲಿ ತರುಗುಮಿಕ್ಕಾಗಿ ಲಡ್ಡುಗೆ ಚಿಕ್ಕಗಣಪ ಉಂಡು ಚಕ್ಕನೆ ವರಕೊಡು ಗಣರಾಯ 6
ಚಲ್ವ ರಾಮೇಶನನೆಲೆಕಂಡ ಪುರುಷನೆಇಲಿವಾಹನ ನಮ್ಮ ಸಲುಭದಿ ಗೆಲಿಸಯ್ಯ7
****