Showing posts with label ಸ್ಮರಿಸಿ ಬದುಕಿರೋ ಶ್ರೀಪಾದ lakshmeesha vittala sripadaraya stutih. Show all posts
Showing posts with label ಸ್ಮರಿಸಿ ಬದುಕಿರೋ ಶ್ರೀಪಾದ lakshmeesha vittala sripadaraya stutih. Show all posts

Friday, 27 December 2019

ಸ್ಮರಿಸಿ ಬದುಕಿರೋ ಶ್ರೀಪಾದರಾಜರಾ ankita lakshmeesha vittala sripadaraya stutih

ಸ್ಮರಿಸಿ ಬದುಕಿರೋ ಶ್ರೀಪಾದರಾಜರಾ |
ಕಷ್ಟ ಕಳೆದು ಇಷ್ಟವ ಕೊಡುವ ದಿವ್ಯ ಪಾದರಾ || ಪ ||

ದಾಸಕೂಟದಿ ಅಗ್ರಗಣ್ಯರೆನಿಪರ |
ದಿಟದಿಂದಲಿ ಭವಸಾಗರ ದಾಟಿಸುವರಾ || ೧ ||

ಜ್ಞಾನದಾಯಕರ ಭವ್ಯ ಭೋಜನ ಭೋಕ್ತರ |
ಕೀರ್ತಿವಂತರ ಅನೇಕ ಮಹಿಮದಾಂತರ || ೨ ||

ಅಲವಭೋದರ ಮತದಿ ಸುಲಭ ಚಂದಿರ |
ಭಜಿಪ ಭಕ್ತರ ಭಯವ ಪರಿಹರಿಸುವರ || ೩ ||

ಮುಖ್ಯದ್ವಾರದಿ ಇದ್ದ ರಂಗ ವಿಠ್ಠಲನ |
ಅಂತರಂಗದಿ ಮಹಾ ಮಂಗಳಾಂಗನಾ || ೪ ||

ಲೆಖ್ಖವಿಲ್ಲದೇ ಪೃಥ್ವಿ ತಿರುಗಿಬಂದರೂ |
ವ್ಯರ್ಥವಲ್ಲದೇ ಗುರು ಭಕ್ತಿ ದೊರೆಯದು || ೫ ||

ದಾಸರಾದರೆ ಮಾತ್ರ ಸೂಸಿ ಕಾಯುವ |
ಲಕ್ಷ್ಮೀಶ ವಿಠ್ಠಲನ ತಂದು ಅಂದೆ ತೋರುವ || ೬ ||
********