Showing posts with label ಆರುತಿಯನೆತ್ತುವೆನು ವಾರಿಜಾಕ್ಷ ಕೃಷ್ಣ ನಿನಗೆ prananatha vittala. Show all posts
Showing posts with label ಆರುತಿಯನೆತ್ತುವೆನು ವಾರಿಜಾಕ್ಷ ಕೃಷ್ಣ ನಿನಗೆ prananatha vittala. Show all posts

Thursday, 5 August 2021

ಆರುತಿಯನೆತ್ತುವೆನು ವಾರಿಜಾಕ್ಷ ಕೃಷ್ಣ ನಿನಗೆ ankita prananatha vittala

 ..

kruti by bagepalli shesha dasaru ಬಾಗೇಪಲ್ಲಿ ಶೇಷದಾಸರು


ಆರತಿಯನೆತ್ತುವೆನು ವಾರಿಜಾಕ್ಷ ಕೃಷ್ಣ ನಿನಗೆ ಪ


ತಾಮರಸದಳಾಕ್ಷ ನಿನಗೆ ಹೇಮದ ತಟ್ಟಿಯನು ಪಿಡಿದು ಅ.ಪ


ಮಾರಸುಂದರ ಮೋಹನಾಂಗ ಸಾರಸಾಕ್ಷ ಕೃಪಾಪಾಂಗ

ನಾರಿಜನರ ಮತ್ತಭೃಂಗ ಧೀರ ಮಂಗಳಾಂಗ ನಿನಗೆ


ಕಮಲ ನಯನ ಹರಿಯೆ ನಿನಗೆ ವಿಮಲಮುತ್ತಿನ ಆರತಿಯ

ಕಮಲ ಮುಖಿಯು ಕರದಿ ಪಿಡಿದು ಕಮಲವದನ ಕೃಷ್ಣ ನಿನಗೆ 2


ಜಾಣ ಪ್ರಾಣನಾಥ ವಿಠಲ ಆಣಿ ಮುತ್ತಿನ ಆರತಿಯ

ಜಾಣತನದಿ ಕರದಿ ಪಿಡಿದು ಪ್ರಾಣಕಾಂತ ಕೃಷ್ಣ ನಿನಗೆ 3

***