Showing posts with label ಅಂದೇನಿಂದೆನುತಾ ಒಂದು ಮನದಿ ನಿಂದು ನಂಬ ಬಲ್ಲಡೆ ಸಾಕು gurumahipati. Show all posts
Showing posts with label ಅಂದೇನಿಂದೆನುತಾ ಒಂದು ಮನದಿ ನಿಂದು ನಂಬ ಬಲ್ಲಡೆ ಸಾಕು gurumahipati. Show all posts

Wednesday, 1 September 2021

ಅಂದೇನಿಂದೆನುತಾ ಒಂದು ಮನದಿ ನಿಂದು ನಂಬ ಬಲ್ಲಡೆ ಸಾಕು ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಅಂದೇನಿಂದೆನುತಾ ಪ 

ಒಂದು ಮನದಿ ನಿಂದು ನಂಬ ಬಲ್ಲಡೆ ಸಾಕು|ತನ್ನ| ಹೊಂದಿದವರ ಕಾವಾ ಇಂದಿರೇಯರಸನು ಅ.ಪ. 

ಸಗರ ಕಾರ್ತೀಕನು ಭಗೀರಥ ಮೊದಲಾದಾ| ಸುಗುಣ ರಾಯರನುಧ್ಧರಿಸಿಹ| ಜಗದೊಳೀ ಪಾಮರ ಲೋಕದ ಕುಂದವ| ಬಗೆಯದೇಪಾವನ ಮಾಡುವ ಗಂಗೆಗೆ 1 

ರನ್ನಗಣಕು ಪರೀಕ್ಷೆ ಮುಖ್ಯರಾಗಿಹ| ಮನ್ನೆಣೆಯವರನು ಎಚ್ಚರಿಸಿ| ಮುನ್ನಿನ ಬೋಧಧಿ ಭಾವಿಕ ಸಾಧಕ| ರನ್ನು ತಾರಿಸುವ ಸತ್ಸಂಗ ಮಹಿಮೆಗೆ 2 

ಹಿಂದಿನ ಶರಣರ ಸಲಹಿದ ದೇವರಿ| ಗಿಂದೇನು ಮಹಿಮೆಗೆ ಬಲ್ಲವಿಲ್ಲದೇ| ತಂದೆ ಮಹಿಪತಿ ಸ್ವಾಮಿಯ ನಾಮವ| ಛಂದದಿ ನೆನೆಯುತ ಇಹಪರ ಪಡೆವುದಕ 3

***