ಕಾಖಂಡಕಿ ಶ್ರೀ ಕೃಷ್ಣದಾಸರು
ಅಂದೇನಿಂದೆನುತಾ ಪ
ಒಂದು ಮನದಿ ನಿಂದು ನಂಬ ಬಲ್ಲಡೆ ಸಾಕು|ತನ್ನ| ಹೊಂದಿದವರ ಕಾವಾ ಇಂದಿರೇಯರಸನು ಅ.ಪ.
ಸಗರ ಕಾರ್ತೀಕನು ಭಗೀರಥ ಮೊದಲಾದಾ| ಸುಗುಣ ರಾಯರನುಧ್ಧರಿಸಿಹ| ಜಗದೊಳೀ ಪಾಮರ ಲೋಕದ ಕುಂದವ| ಬಗೆಯದೇಪಾವನ ಮಾಡುವ ಗಂಗೆಗೆ 1
ರನ್ನಗಣಕು ಪರೀಕ್ಷೆ ಮುಖ್ಯರಾಗಿಹ| ಮನ್ನೆಣೆಯವರನು ಎಚ್ಚರಿಸಿ| ಮುನ್ನಿನ ಬೋಧಧಿ ಭಾವಿಕ ಸಾಧಕ| ರನ್ನು ತಾರಿಸುವ ಸತ್ಸಂಗ ಮಹಿಮೆಗೆ 2
ಹಿಂದಿನ ಶರಣರ ಸಲಹಿದ ದೇವರಿ| ಗಿಂದೇನು ಮಹಿಮೆಗೆ ಬಲ್ಲವಿಲ್ಲದೇ| ತಂದೆ ಮಹಿಪತಿ ಸ್ವಾಮಿಯ ನಾಮವ| ಛಂದದಿ ನೆನೆಯುತ ಇಹಪರ ಪಡೆವುದಕ 3
***
No comments:
Post a Comment