Showing posts with label ಅಂಜನಾ ದೇವಿಗೆ ಸುತನಾಗಿ ಜನಿಸಿದ ಹನುಮ purandara vittala ANJANA DEVIGE SUTANAAGI JANISIDA HANUMA. Show all posts
Showing posts with label ಅಂಜನಾ ದೇವಿಗೆ ಸುತನಾಗಿ ಜನಿಸಿದ ಹನುಮ purandara vittala ANJANA DEVIGE SUTANAAGI JANISIDA HANUMA. Show all posts

Saturday, 2 October 2021

ಅಂಜನಾ ದೇವಿಗೆ ಸುತನಾಗಿ ಜನಿಸಿದ ಹನುಮ purandara vittala ANJANA DEVIGE SUTANAAGI JANISIDA HANUMA



ಅಂಜನಾ ದೇವಿಗೆ ಸುತನಾಗಿ ಜನಿಸಿದ ಹನುಮ 
ನಿನಗೆ ನಮೋ ನಮೋ
ಹನುಮ ನಿನಗೆ ನಮೋ ನಮೋ । 
ಹನುಮ ನಿನಗೆ ನಮೋ ನಮೋ ।।ಅಂಜನಾ ।।

ಅಂಜಾದ್ರಿ  ಸೀತೆಗೆ ಉಂಗುರವಿಟ್ಟ  ನಿನ್ನ ಚರಣ ಕಮಲಕೆ ನಮೋ ನಮೋ ।।ಅಂಜನಾ ।।

ದುರುಳಾಕ್ಷಯನ  ಕೊರಳನು ಕೊಯ್ದ ಶೂರ ಧೀರ ನಮೋ ನಮೋ ।
ಭರದಿ ಲಂಕಾಪುರವನು ಹರಣಕೆ  ಆಹುತಿ ಇಟ್ಟನೆ  ನಮೋ ನಮೋ ।।ಅಂಜನಾ ।।

ನಂದನ ಕಂದನ ಸುಂದರ ವದನನ  ನೆಂಟ ನಿನಗೆ ನಮೋ ನಮೋ ।
ಅಮೃತಶ್ರೀ ಸೌಗಂಧಿಕೆ ತಂದಿಟ್ಟ  ಕುಂತಿಯ ಕುಮಾರ ನಮೋ ನಮೋ ।।ಅಂಜನಾ ।।

ಯತಿಯಾಗಿ ಶ್ರೀಪತಿಯ ಪ್ರೀತಿಯ ಪಡೆದ ಮಧ್ವರಾಯ  ನಿನಗೆ ನಮೋ ನಮೋ ।
ಗತಿತೋರುವ ತಂದೆ ಪುರಂದರ ವಿಠಲನ ದಾಸಾದಾಯಿಯೇ ನಮೋ ನಮೋ ।।ಅಂಜನಾ ।।
*******