Showing posts with label ಳಳ- RSS- ಸ್ವರ್ಗದ ಸೊಬಗನು ಮೀರಿಸಿ others rss. Show all posts
Showing posts with label ಳಳ- RSS- ಸ್ವರ್ಗದ ಸೊಬಗನು ಮೀರಿಸಿ others rss. Show all posts

Friday 24 December 2021

ಸ್ವರ್ಗದ ಸೊಬಗನು ಮೀರಿಸಿ others rss

   

RSS song .

ಸ್ವರ್ಗದ ಸೊಬಗನು ಮೀರಿಸಿ ಮೆರೆದಿಹ ಭಾರತದ ಅಂಗಳದಲ್ಲಿ

ಕೇಶವ ಉದಿಸಿದ ಸಂಘದ ಹಣತೆಯು ಬೆಳಗಿತು ಜನಮನ ಮನದಲ್ಲಿ ||ಪ||


ತನ್ನೀ ನೆಲಜಲ ಧರ್ಮಸಂಸ್ಕೃತಿ ಹಿಂದು ಜನತೆಯು ಮೆರೆತಿರಲು

ದಾಸ್ಯದ ಉರುಳಿಗೆ ಕೊರಳನು ನೀಡಿ ಸ್ವಾರ್ಥದ ಕೂಪದಿ ಮುಳುಗಿರಲು

ಘೋರ ನಿರಾಸೆಯ ಘನ ತಿಮಿರದಿ ತಾ ಯುವ ಜನತೆಯು ಎದೆಗುಂದಿರಲು

ಕೇಶವ ತೋರಿದ ಧ್ಯೇಯದ ಗಾದಿ ಅಂತಿಮ ವಿಜಯದ ಹಾದಿಯೊಳು

ಮಾತೆಯ ಸೇವೆಯ ಅನುದಿನ ಮಾಡಲು ಜೀವನವನು ಮುಡಿಪಾಗಿಡಲು ||೧||


ಭಾರತದೇಶದ ಭವ್ಯಪರಪಂಪರೆ ಜಗದಲ್ಲಿದು ಮಹಿಮಾನ್ವಿತವು

ವೀರ ಸುಪುತ್ರರ ಸಾಹಸ ಚರಿತೆಯು ಶೌರ್ಯಪ್ರತಾಪ ಗುಣಾನ್ವಿತವು

ಅಗಣಿತ ಋಷಿಮುನಿ ಸಂತರ ನಾಡಿದು ಅನುಪಮ ಕಲೆಗಳ ನೆಲೆವೀಡು

ಎಮ್ಮಯ ಹೆಮ್ಮೆಯ ಹಿಂದುಸ್ಥಾನ ಯುಗಯುಗದ ಅಭಿಮಾನವಿದು

ಸಂಘದ ಮಂತ್ರವ ಪಠಿಸುತ ನಾಡೊಳು ಐಕ್ಯದ ಆರತಿ ಬೆಳಗಿಸಲು ||೨||


ಹಿಂದುತ್ವದ ಸಿಹಿ ಅಮೃತ ಉಣಿಸಿದ ದೈವಿಕ ಮೂರ್ತಿ ಕೇಶವನೇ

ಬಂಧುತ್ವದ ಸುಧೆ ನಾಡಲಿ ಹರಿಸಿದೆ ಮುನಿಪುಂಗವ ಹೇ ಮಾಧವನೇ

ಹಾಲಾಹಲವನು ನುಂಗುತ ನಗುತಲಿ ಮಾತೆಯ ಕಣ್ಣೀರೊರೆಸುತಲಿ

ಬೆಳೆದಿರಿ ಎತ್ತರ ಎತ್ತರ ನೀವು ಮುಗಿಲಿನ ಮೇರೆಯ ಮೀರುತಲಿ

ಧನ್ಯವು ನಿಮ್ಮಯ ಜೀವನ ಋಷಿವರ ಹೆಸೆರೆಂದಿಗು ಅಜರಾಮರವು ||೩||

***

svargada sobaganu mIrisi merediha BAratada aMgaLadalli

kESava udisida saMGada haNateyu beLagitu janamana manadalli ||pa||


tannI nelajala dharmasaMskRuti hiMdu janateyu meretiralu

dAsyada uruLige koraLanu nIDi svArthada kUpadi muLugiralu

GOra nirAseya Gana timiradi tA yuva janateyu edeguMdiralu

kESava tOrida dhyEyada gAdi aMtima vijayada hAdiyoLu

mAteya sEveya anudina mADalu jIvanavanu muDipAgiDalu ||1||


BAratadESada BavyaparapaMpare jagadallidu mahimAnvitavu

vIra suputrara sAhasa cariteyu SouryapratApa guNAnvitavu

agaNita RuShimuni saMtara nADidu anupama kalegaLa nelevIDu

emmaya hemmeya hiMdusthAna yugayugada aBimAnavidu

saMGada maMtrava paThisuta nADoLu aikyada Arati beLagisalu ||2||


hiMdutvada sihi amRuta uNisida daivika mUrti kESavanE

baMdhutvada sudhe nADalihariside munipuMgava hE mAdhavanE

hAlAhalavanu nuMguta nagutali mAteya kaNNIroresutali

beLediri ettara ettara nIvu mugilina mEreya mIrutali

dhanyavu nimmaya jIvana RuShivara hesereMdigu ajarAmaravu ||3||

***