ರಾಗ ಹಿಂದೋಳ ಆದಿತಾಳ
ಸಾಹಿತ್ಯ: Smt. ಸೀತಾಶೇಖರ್
ಪಲ್ಲವಿ
ವಾಗ್ದೇವಿ ಸರಸ್ವತಿ
ಚರಣಕ್ಕೆರಗುವೆ ನೀಡು ಸನ್ಮತಿ
ಚರಣ
ಕುಣಿದಾಡೆ ಎನ್ನ ನಾಲಿಗೆಯಲಿ ನಿಂದು
ನಲಿದಾಡೆ ಸಪ್ತ ಸ್ವರದಲಿ ಬಂದು
ಶೃತಿಗತಿ ತಾಳಕೆ ಬಾರದೆ ಕುಂದು
ಅನುಗ್ರಹಿಸು ತಾಯಿ ನೀನೀಗ ಬಂದು
ಚರಣ
ಸರಸಿಜೋದ್ಭವಳೆ ಸಾರಸನೇತ್ರೆ
ಸಾಮಗಾನಪ್ರಿಯೆ ಸುಂದರ ವದನೆ
ಶ್ವೇತಾಂಬರಧರೆ ಸಂಗೀತ ರೂಪಿಣಿ
ವೀಣಾಪಾಣಿ ಪುಸ್ತಕ ಧಾರಿಣಿ
***