ಗೋವಿಂದ ಗೋಪಾಲಕಾ ಮಮಪ್ರಸೀದ
ಗೋವರ್ಧನೋದ್ಧಾರಕ ಪ
ನಂದಗೋಪ ಕುಮಾರಂ ಗೋಪಾಂಗನಾ
ಬೃಂದದುಕೂಲ ಚೋರಾ
ಸೌಂದರ್ಯ ಕೋಟಿ ಮದನಾ ಹರೆ ಶರ
ದಿಂದುಸಮಾನವದನಾ
ಮಂದರಧರ ಸಂಕ್ರಂದನ ಸನಕ ಸ
ನಂದನ ಮುನಿಮುಖವಂದಿತ ಚರಣಾ 1
ಚಾಣೂರಮದದಮನಾ ಗೋಪಾಲಬಾಲ
ಬಾಣಗರಳದಮನಾ ವೇಣುನಾದ ವಿನೋದ ಕೋದಂಡಪಾ
ರೀಣ ಸಹಸ್ರಪಾದಾ ವೇಣಿ ಪಿಂಚ ಪುರಾಣ ಪುರುಷ ಪರ
ಮಾಣು ದೇಹಿ ವರಪಾಣಿ ಸುವಿನುತಾ 2
ಅಂಗದ ಗುರುಖಂಡನಾ ಕಿಂಕಿಣಿ ಕಂಕ
ಣಾಂಗದ ಮಣಿಮಂಡನ
ಗಂಗ ಸಂಜಾತಾಭರಣಾ ಗೋಪಾಲ ಬಾಲಂಗನಾಂತ
ರಂಗಮುನೀಂದ್ರಭರಣಾ
ಅಂಗಜ ಜನಕ ವಿಹಂಗ ತುರಂಗ
ರಂಗದನುಜಹರ ಸಂಗರವಿಜಯಾ 3
ಪಾಂಡವ ವರದಾಯಕಾ ಅಖಿ
ಳಾಂಡಕೋಟಿ ಬ್ರಹ್ಮಾಂಡನಾಯಕ
ಕಂಡೇಂದು ಸಮಫಾಲ ಗೋಪಾಲಬಾಲ ಕಂಡಿತೇಂದು ಜಾಲ
ಖಂಡಪರಶು ಕೋದಂಡದಳನ ಮಣಿ
ಕುಂಡಲರಾಜಿತ ಗಂಡಉಗ್ರಸ್ಥಳಾ 4
ಕಾರುಣ್ಯ ಸದ್ಗುಣಯತಾ ಗಂಧರ್ವ ಸಿದ್ಧ
ಚಾರಣ ಸರಿತಾ ಶೌರೆ ಕೋಸಲಪುರವಾಸ ಸಂಸಾರ ಸಿಂಧು
ಕಾರಣ ಮಂದಹಾಸ
ರಾವಣ ವೈರಿ ನಿವಾರಣತಾಂಸ ವಿದಾರಣ
ಕುವಲಯ ಕಾರಣ ಪಾಹಿ 5
***