by ಗುರುತಂದೆವರದಗೋಪಾಲ ವಿಠಲ
ಮಂಗಳಾವೆನ್ನಿರೊ ಜಗಮಂಗಳ ನಾಯಕಗೆ ಶುಭ ಮಂಗಳಾ ಎನ್ನಿರೋ ಶುಭ ನಿಧಿಗೆ ಪ
ಮಂಗಳಾ ಗುರುವಾದಿರಾಜರಿಗೆ ಜಯಮಂಗಳಾ ಭಾವಿ ಮುಖ್ಯಪ್ರಾಣರಾಜನೀಗೆಅ.ಪ.
ಮಾಯಾವಾದಿಗಳಾ ಗೆದ್ದ ಸ್ವಾದಿಪುರವಾಸಿಯಾದ ವಾದಿರಾಜಾ ಮಧ್ವಮುನಿಗೆ ಜಯಮಂಗಳಾ 1
ಭೂತರಾಜಾರಿಂದ ಸೇವ್ಯಾಭೂತ ಪತಿಗೊಲಿದ ಗುರು ಲಾತವ್ಯ ರಾಜರಿಗೆ ಜಯಮಂಗಳಾ 2
ಧವಳಗಂಗಾವಾಸಿಯಾದ ಹಯಗ್ರೀವ ತ್ರಿವಿಕ್ರಮಾ ವೇದವ್ಯಾಸರ ಪೂಜಿಪಗೆ ಜಯಮಂಗಳಾ 3
ಹಂಸವಾಹನಾರೂಢರಾದ ಭಾವಿ ಭಾರತಿ ಪತಿ ರಮಣ ಹರಿಯಾ ಪ್ರಥಮಾಂಗ ಮುಖ್ಯಪ್ರತಿಬಿಂಬಾಣೆಗುರುತಂದೆವರದಗೋಪಾಲವಿಠ್ಠಲನಾ ವೀಹಾರಕ್ಕಾ-ವಾಸನಾದ ಸುವ್ರೇತಾ ಘನದೂತಾ ಗುರುವಾದಿರಾಜಗೆ 4
****