ನಮ್ಮ ಗಿರಿಯ ತಿಮ್ಮ ಪರಬೊಮ್ಮ l
ನಮ್ಮ ವೊಮ್ಮೊಮ್ಮೆ ಕಾಯೋದಮ್ಮ ll ಪ ll
ರಂಗ ದುರಿತಭಂಗ ಗುಣ ತ l
ರಂಗ ಜಗದೊಳಗೆ ನೀನೆ ಸರ್ವೋತ್ತುಂಗ ll 1 ll
ನೋಡೊ ಎನ್ನಲ್ಲಿ ಕೃಪೆಮಾಡೊ ಕೈಯ l
ನೀಡೊ ಎನ್ನ ಪೊರೆವೆನೆಂಬ ಮಾತನಾಡೊ ll 2 ll
ಏಳು ಎನ್ನ ಮಾತ ಕೇಳು ಕಡು ಕೃ l
ಪಾಳು ನಿನ್ನ ಹದನ ಎನಗೊಲಿದು
ಪೇಳು ll 3 ll
ಯಂದಮಾತಿಗೆ ಮುಂದನಿಂದ ನೀ ಕರುಣಿ ಗೋ l
ವಿಂದ ಎಂಬುದಿನ್ನು ನಿನಗ ಛಂದ ll 4 ll
ಪ್ರಿಯ ಎನ್ನ ಕಾಯೋ ಜೀಯ ಮುಕ್ತ್ಯುಪಾಯ l
ಹಯವದನ ಶೇಷಗಿರಿರಾಯ ll 5 ll
****
ರಾಗ - ಮೋಹನ ತಾಳ - ಝಮ್ಪೆ ತಾಳ (raga, taala may differ in audio)