Showing posts with label ರಾಮನ ನೋಡಿರೈ ರಘುಕುಲಸೋಮನ prasannavenkata. Show all posts
Showing posts with label ರಾಮನ ನೋಡಿರೈ ರಘುಕುಲಸೋಮನ prasannavenkata. Show all posts

Saturday, 16 November 2019

ರಾಮನ ನೋಡಿರೈ ರಘುಕುಲಸೋಮನ ankita prasannavenkata

by ಪ್ರಸನ್ನವೆಂಕಟದಾಸರು
ರಾಮನ ನೋಡಿರೈ ರಘುಕುಲಸೋಮನ ಪಾಡಿರೈ ಪ.

ಜೀಮೂತಶ್ಯಾಮಲಕಾಯ ಜನಕಜಾಮಾತಸೀತಾಕಾಂತಅ.ಪ.

ಕೋಟಿದಿವಾಕರನಿಭ ಮಕುಟದ ಮಸ್ತಕದ ಮುದ್ದಿನ ಮುಖದನೀಟಹ ಪಣೆಯಲಿಮೃಗಮದಪುಂಡ್ರತಿಲಕದ ನೀಲಾಳಕದಮಾಟಕ ಮದನನ ಬಿಲ್ಲ ಹಳಿವ ಹುಬ್ಬುಗಳ ಇತ್ತಂಡಗಳನೋಟದಿ ದಯಾರಸ ಸೂಸುವ ಕಮಲದಳಗಳ ಸಮನಯನಗಳ 1

ಎಸೆವ ಸುನಾಸಿಕ ಜ್ವಲಿತಕುಂಡಲಸ್ಮಿತವದನ ಶಶಿಸಮರದನಹೊಸ ತುಲಸಿಯ ಮಂಜರಿ ವನಮಾಲಾಧರನ ಸತ್ಕಂಧರನಮಿಸುನಿಯವೈಜಯಂತಿತ್ರಿಸರವು ದಿವ್ಯಪದಕಗಳ ಝಳ ಝಳಪುಗಳಲಸತ್ ಶ್ರೀವತ್ಸ ವಕ್ಷದಿ ಕುಂಕುಮ ಚಂದನದ ಗುಣಗಣಘನದ 2

ಮರಕತಸ್ತಂಭಗಳಿಗೆ ಪೋಲ್ವೆಡೆಬಾಹುಗಳ ಅಂಗದಯುಗಳಕರವಲಯಾಂಗುಲಿಮುದ್ರಿಕೆ ಧೃತಕೋದಂಡ ದಂಡಕದಂಡಸಿರಿಜಠರತ್ರಿವಳಿಗಂಭೀರನಾಭ ನಿರ್ಜರನಾಭವರಪಿಂಗಳ ಕೌಶೇಯಾಂಬರಕಟಿಸೂತ್ರಶ್ರೀ ಬ್ರಹ್ಮಸೂತ್ರ3

ಬಟ್ಟದೊಡೆಜಾನುಘಟ್ಟಿದಂತೋಪಮ ಜಂಘ ಸಂವೃತ ಜಂಘಾಕುಟಿಲ ನೀ ರಾಕ್ಷಸದಲ್ಲಣ ಪೆಂಡೆಯದ ಚೆಲುವಾ ಜನಜನಿಗೊಲಿವಕಠಿಣತರ ಪದತಳದೆಡೆ ಧ್ವಜಾಂಕುಶಾಂಬುಜ ಹೃತ್ಕಲುಷಾನಿಟಿಲನಯನ ವಿಧಿಸುರ ಋಷಿವಂದಿತಚರಣನೂಪುರಾಭರಣ4

ಸುಖಮುನಿ ಮುಖ್ಯಮುನಿ ಪೂಜಿತ ವಿಗ್ರಹ ವಾರಾಪಾರವಿಹಾರನಿಖಿಲ ಗುಣಾರ್ಣವ ನಿತ್ಯದಯಾರ್ಣವ ರಾಜ ರಾಜಾಧಿರಾಜಸಕಲ ಸಂಯಮಿಕುಲಮೌಳಿರತುನ ಸತ್ಯಪೂರ್ಣ
********