RAO COLLECTIONS SONGS refer remember refresh render DEVARANAMA
..
ಜಯಮಂಗಳೆನ್ನಿರೆ ದೇವಗೆ | ಸಂಗೀತದಿಂದಲಿ ಶ್ರೀಶಯನಿಗೆ ಪ
ನಾಗಭೂಷಣ ಸುತ ನಾಗಶಯನೆಗೆ |
ನಾಗವೇಣಿಯರು ನಾರದವರದಗೆ 1
ಪೂವಿನ ಶರವಿತ ಪಾವನ ಮೂರ್ತಿಗೆ |
ರಾವಣಾರಿ ರಘುವೀರನಿಗೆ 2
ಶ್ರೀಮಹೀವಲ್ಲಭ ಶಾಮಸುಂದರಗೆ |
ಸೀಮಂತಿನಿಯರು ಕೋಮಲಾಂಗಗೆ 3
***