Showing posts with label ಬಾರಯ್ಯ ಬಾ ಗುರುವೆ ಪರಬ್ರಹ್ಮದರುವೆ bheemashankara. Show all posts
Showing posts with label ಬಾರಯ್ಯ ಬಾ ಗುರುವೆ ಪರಬ್ರಹ್ಮದರುವೆ bheemashankara. Show all posts

Friday, 6 August 2021

ಬಾರಯ್ಯ ಬಾ ಗುರುವೆ ಪರಬ್ರಹ್ಮದರುವೆ ankita bheemashankara

 ..

 kruti by ಭೀಮಾಶಂಕರರು ದಾಸರು bheemashankara


ಬಾರಯ್ಯ ಬಾ ಗುರುವೆ ಪರಬ್ರಹ್ಮದರುವೆ ಪ


ತರಣಿ ಕೋಟಿ ಪ್ರಕಾಶ ಗುರು ಮೂರ್ತಿ ಪ್ರಭುವೆ ಅ.ಪ.


ಬಾರಯ್ಯ ಶಿರಸದಿ ಸುರನದಿ ತರುವೆ | ಮೆರೆವ ಅಗ್ನಿಯ ನೇತ್ರ ರವಿಶಶಿ ಹೊಳೆವೆ | ಉರಗ ಕಂಕಣ ಕರಕಪಾಲ ಪಿಡಿವೆ | ಹರ ಹರ ಎಂಬ ಭಕ್ತರಿಗೆ ವರವೆ || ಬಾರಯ್ಯ 1


ಕರ್ಣ ಕುಂಡಲವರ್ಣ ಪೂರ್ಣಚಂದ್ರಮನ | ಅರುಣ ಉದಯದ ಕಿರಣ ಹೊಳೆವ ಸುವರ್ಣ | ತರಣಿ ಸೆಳೆದ ವಸನ ಮಿಂಚಿನ ವರ್ಣ |ಶರಣು ಮಾಡುವೆ ನಿಮ್ಮ ಎರಡೂ ಚರಣ || ಬಾರಯ್ಯ 2


ಕಾಮಸಂಹಾರ ರಾಮನ್ನಾಮದ ಪ್ರೇಮಾ | ವಾಮಾಂಗದಲಿ ನಿಮ್ಮ ಅನ್ನಪೂರ್ಣಮ್ಮಾ | ಧಾಮ ಮಾಡಿದಿ ನಿಮ್ಮ ಭೃಂಗಾವಳೀ ಗ್ರಾಮಾ | ಭೀಮಾಶಂಕರಗೊಲಿದ ಸದ್ಗುರು ಆತ್ಮಾ || ಬಾರಯ್ಯ 3ಚಿ

***