Showing posts with label ಸೀತೆ ಸದ್ಗುಣ ಗಣ ವ್ರಾತೆ ಈರೇಳು ಲೋಕ pranesha vittala. Show all posts
Showing posts with label ಸೀತೆ ಸದ್ಗುಣ ಗಣ ವ್ರಾತೆ ಈರೇಳು ಲೋಕ pranesha vittala. Show all posts

Monday 18 November 2019

ಸೀತೆ ಸದ್ಗುಣ ಗಣ ವ್ರಾತೆ ಈರೇಳು ಲೋಕ ankita pranesha vittala

by ಪ್ರಾಣೇಶದಾಸರು
ಸೀತೆ ಸದ್ಗುಣ ಗಣ | ವ್ರಾತೆ ಈರೇಳು ಲೋಕ |ಮಾತೆ ಪ್ರಣತ ಜನ | ಪ್ರೀತೆ ಸಾಗರ ಜಾತೆ ||ಮಾತು ಮಾತಿಗೆ ರಘು | ನಾಥನ ಸ್ಮರಣೆಯ |ಆತುರದಲಿ ಕೊಡು | ಸಿತಾಂಶು ವದನೆ ||ಪಲ್ಲ||

ಶ್ರೀ ಭೂ ದುರ್ಗಾಂಭ್ರಣೀ ಸ್ವ | ರ್ಣಾಭೆ ರಾಮನ ರಾಣೀ |ಸಾಭಿಮಾನ ನಿನ್ನದ | ಮ್ಮಾ ಬಾಲಕನ ಕರ- ||ವ ಬಿಡದಲೆ ಸರ್ವ | ದಾ ಬಾದರಾಯಣನಂ- |ಘ್ರಿಬಿಸಜದ್ವಯವ | ನೇ ಭಜಿಸಲು ಜ್ಞಾನ- ||ವ ಒಲಿಸುವದತಿ | ಶೋಭನ ವಿಗ್ರಹೆ |ಹೇ ಬಡವನು ಗೈ | ಯ್ವಾ ಬಿನ್ನಪವನು |ನೀ ಬಿಸುಟದೆ ಬಹ | ಳಾ ಭಯ ಪರಿಹರಿ |ಸೀ ಭಕುತ ಜನರೊ | ಳು ಬೆರಸುವದೇ 1

ಮಾಕಂಜದಳನೇತ್ರೆ | ಶ್ರೀ ಕುಂಭಿಣೀಜೆ ದಾತೆ |ನೀ ಕರುಣದಿ ನೋ | ಡೀಕಕುಲಾತಿಹಿಂಗಿಸೆ |ಬೇಕು ಸತ್ಸಾಧನವು | ಸಾಕು ದುರ್ವಿಷಯಗಳು |ಲೌಕಿಕಗಳೆಲ್ಲಾ ವೈ | ದಿಕವಾಗಲೆನಗೆ ||ನಾಕು ಮೊಗನ ಜನ | ನೀ ಕರಿಗಮನೆ ಪ- |ರಾಕುದಿವಿಜನುತೆ | ಶೋಕರಹಿತೆ ದನು- |ಜಾ ಕುಲ ಸಂಹರೆ | ಈ ಕಠಿಣ ಭವದೊ- |ಳೇಕೆ ದಣಿಸುತಿಹೆ | ನೀ ಕಡೆಗೆತ್ತಲೆ 2

ದಾತಪ್ರಾಣೇಶ ವಿಠಲ | ಸೋತೆನೆಂದು ನಗಲು ನೀ- |ನಾತನ ದಾಯದಿಂ ಪುರು | ಹೂತನ ಸೋಲಿಸಿ ಪ್ರ- |ಖ್ಯಾತೆಯಾದೆ ಉದರೌ | ಜಾತ ಸದನೆ |ಸತ್ರಾಜಿತೆ ಲಕ್ಷ್ಮೀಯಾದಿ ದೇ | ವತೆಭಾಸ್ಕರಕಾಂತೆ ||ಭೂತಳದೊಳಗೆ ಅ | ನಾಥರಿಗೆವರಪ್ರ- |ದಾತೆ ಕೃಪಾ ನಿಧಿ | ಯೇ ತಡೆ ದುರ್ಮತಿ |ಧೌತ ವ್ರಜನಿ ಧರಿ | ಪೋತನಕನಲದೆ |ವಾತಪೂಜಿತೆ ರಮೆ | ಪಾತು ಪ್ರತಿಕ್ಷಣದಿ 3
*******