by ದಾಸರ ಲಕ್ಷ್ಮೀನಾರಾಯಣರಾಯರು
ಆರತಿಯನೆತ್ತಿರೆ ಅಚ್ಯುತನಿಗೆ
ಅನಂತನಿಗೆ ಗೋವಿಂದನಿಗೆ ||ಪ||
ಕಾಲಾಂತರ್ಗತ ಕಾಲನಿಯಾಮಕ
ಕಾಲೋತ್ಪಾದಕ ಕಾಲಾತ್ಮನಿಗೆ ||೧||
ನೊಂದು ಕೌಂಡಿನ್ಯರು ಮುಂದೋರದಲಿರೆ
ಬಂದು ಕರವ ಪಿಡಿದಾನಂದವಿತ್ತಗೆ ||೨||
ಸಂತತ ನಡೆಯುವರಂತರ ಬಿಡಿಸುವ-
ನಂತಮಹಿಮ ಜಯವಂತ ಶ್ರೀಕಾಂತಗೆ ||೩||
********
ಆರತಿಯನೆತ್ತಿರೆ ಅಚ್ಯುತನಿಗೆ
ಅನಂತನಿಗೆ ಗೋವಿಂದನಿಗೆ ||ಪ||
ಕಾಲಾಂತರ್ಗತ ಕಾಲನಿಯಾಮಕ
ಕಾಲೋತ್ಪಾದಕ ಕಾಲಾತ್ಮನಿಗೆ ||೧||
ನೊಂದು ಕೌಂಡಿನ್ಯರು ಮುಂದೋರದಲಿರೆ
ಬಂದು ಕರವ ಪಿಡಿದಾನಂದವಿತ್ತಗೆ ||೨||
ಸಂತತ ನಡೆಯುವರಂತರ ಬಿಡಿಸುವ-
ನಂತಮಹಿಮ ಜಯವಂತ ಶ್ರೀಕಾಂತಗೆ ||೩||
********