..
kruti by ಶ್ರೀನಿಧಿವಿಠಲರು shreenidhi vittalaru
ಶಾಂತ ಜನರಿಗೀಶಾ ರವಿಕುಲ
ಕಾಂತನ ನಿಜದಾಸ ಪ
ಭ್ರಾಂತಿ ಬಿಡಿಸಿ ನಿಶ್ಚಿಂತ ಮನದಿ ವೇ-
ದಾಂತವೇದ್ಯನಲಿ ಸಂತಸ ಕೊಡುವನ ಅ.ಪ.
ಕಡಲ ದಾಟಿ ಬಂದೂ ಒಡೆಯನ
ಮಡದಿಗುಂಗುರ ತಂದೂ
ಸಡಗರದಲಿ ತುಡುಗ ದೈತ್ಯವ ಕೊಂದು
ಅಡಿಯಿಡೆ ಲಂಕೆ ಸುಟ್ಟು ಸುಡುಭುಗಿ ಮಾಡಿದೆ 1
ಏಕಚಕ್ರದಲ್ಲೀ ಬಕಗೆಂ-
ದ್ಹಾಕಿದ ಗ್ರಾಸದಲೀ
ಶಾಖಡಿಸಲಬಿಡದೇಕತುತ್ತು ಮಾಡಿ
ಭೀಕರ ದೈತ್ಯನವಲೋಕಿಸದ್ಹೊಡದೆಲೋ 2
ವಾಯು ಹನುಮ ಭೀಮ ಮಧ್ವಾ
ಕಾಯೋ ಪೂರ್ಣಕಾಮಾ
ಸಾಯ ಬಡಿದೀ ನೀ ಮಾಯಿಗಳೆಲ್ಲರ
ರಾಯ ಶ್ರೀನಿಧಿವಿಠಲಾಯಗೆ ತಿಳಿಸಿದೆ ಎಲೆಲೋ 3
***