ರಾಮನುದಿಸಿ ಬಂದ
ಅಯೋಧ್ಯೆಲಿ ರಾಮನುದಿಸಿ ಬಂದ ।
ಮನೆಮನಗಳಲಿ ಹರುಷ ದಾರಿಯ
ಚಿಮ್ಮಿಸುತಲಿ ಬಂದ
ಬೇಡಿದ ಭಕುತರ ಕಾಡುತ (ಲಿ)
ರಘುರಾಮನುದಿಸಿ ಬಂದ ॥
ಯತಿಪುಂಗವರ ಸಾಧುಸಂತರ
ಜಪತಪಕೆ ಬಾಗಿ
ಭಕುತರಧೀನ (ತಾ)ಎಂದೆನುತ
ರಾಮನುದಿಸಿ ಬಂದ ॥
ಮೋದದಿ ನಲಿಕುಣಿದಾಡಿ
ದಿಗಂತದೆಲ್ಲೆಡೆ ಸಂತಸ ಬೀರಿ
ಭಾರತಮಾತೆಯ ಮಡಿಲ ತುಂಬಲು
ರಘುರಾಮ ನುದಿಸಿ ಬಂದ॥
ಜಗವ ಕುಣಿಸುತ
ಭುವಿಯ ಬೆಳಗುತ
ಇಳೆಗೆ ಮುದದಿ ಬಂದ
ಅಜನಪಿತ ವಿಠಲ ತಾನೇ ಬಂದ॥
***