Showing posts with label ಏನು ನೆಲೆ ಯೆನುತಿಹೆ ಮನುಜಾ ನಿ ಧಾನಿಸು ಗತಿಯಚ್ಯುತನಲ್ಲದುಂಟೇ vaikunta vittala. Show all posts
Showing posts with label ಏನು ನೆಲೆ ಯೆನುತಿಹೆ ಮನುಜಾ ನಿ ಧಾನಿಸು ಗತಿಯಚ್ಯುತನಲ್ಲದುಂಟೇ vaikunta vittala. Show all posts

Sunday, 1 August 2021

ಏನು ನೆಲೆ ಯೆನುತಿಹೆ ಮನುಜಾ ನಿ ಧಾನಿಸು ಗತಿಯಚ್ಯುತನಲ್ಲದುಂಟೇ ankita vaikunta vittala

 ..

kruti by ಬೇಲೂರು ವೈಕುಂಠ ದಾಸರು belur vaikunta dasaru


ಯೇನು ನೆಲೆ ಯೆನುತಿಹೆ ಮನುಜಾ ನಿ

ಧಾನಿಸು ಗತಿಯಚ್ಯುತನಲ್ಲದುಂಟೇ ಪ


ಹುಲ್ಲುಹನಿಯು ಗಾಳಿಗಿಟ್ಟ ಸೊಡರು ನೀರ

ಗುಳ್ಳೆಗಳದು ತಾ ಸ್ಥಿರವೆನಿಪಾ

ಜಳ್ಳು ಜವ್ವನವ ನಿಶ್ಚಯವೆಂದು ಕಾಲನ

ಭಲ್ಲೆಯಕೆದೆಯನೊಡ್ಡುವೆಯಾತಕೆ ನೀ 1


ಮಿಂಚಿನ ಬಲೆಯ ರಕ್ಷೆಯ ಮನ ಸುದತಿಯಾ

ಚಂಚಲತೆಯ ಜೀವರ ಗೆಲಿದೂ ಪ್ರ

ಪಂಚಿನ ಸಿರಿಯ ನಿಶ್ಚಯವೆಂದು ಬಗೆದು ನೀ

ಮುಂಚುವೆಯೇಕೆ ನರಕಪತಿ ಕರೆಗೇ 2


ಸುರಚಾಪವೋಲೀ ದೇಹದ ಸಂ

ಗರದಿ ಸೋಲುವ ಶರೀರವ ನಂಬೀ

ನರಕಕೂಪಕ್ಕಿಳಿಯದೇ ವೇಲಾಪುರ

ದರಸ ವೈಕುಂಠ [ಕೇಶವ] ಶರಣೆನ್ನೇ 3

***