Showing posts with label ಕೈಯ ಬಿಡದಿರೆನಗೆ ಹುಯ್ಯಲಿಡುವೆ prasannavenkata. Show all posts
Showing posts with label ಕೈಯ ಬಿಡದಿರೆನಗೆ ಹುಯ್ಯಲಿಡುವೆ prasannavenkata. Show all posts

Monday, 11 November 2019

ಕೈಯ ಬಿಡದಿರೆನಗೆ ಹುಯ್ಯಲಿಡುವೆ ankita prasannavenkata

by ಪ್ರಸನ್ನವೆಂಕಟದಾಸರು
ಕೈಯ ಬಿಡದಿರೆನಗೆ ಹುಯ್ಯಲಿಡುವೆ ನಿನಗೆಅಯ್ಯ ವೆಂಕಟರಾಯ ಅಯ್ಯೋ ಸೋತೆನೊಜೀಯನೀಯೆನ್ನಲಸದೆ ನೋಡೊ ಕೃಪೆಯ ಮಾಡೊ ಪ.

ಜನನ ಮರಣ ಕ್ಷತ ಇನಿತೆ ಸಾಕೆಲೆದಾತಅನುದಿನನಿನ್ನ ನಾಮ ನೆನವಿನಾನಂದ ಪ್ರೇಮತನುಮನದಲ್ಲಿ ಬೆಳಸೊ ಉದಯಿಸೊ 1

ಕರ್ಮಬಟ್ಟೆಯನರಿಯೆ ಧರ್ಮಸಂಗ್ರಹವರಿಯೆಶರ್ಮಚಿಹ್ನಗಳಿದ್ದು ನಿರ್ಮಳಾಂತವಿಲ್ಲ ದುಷ್ಕರ್ಮವೆಲ್ಲ ನಿವಾರಿಸೊ ನೇವರಿಸೊ 2

ಶುದ್ಧ ಸಾತ್ವಿಕ ಮತದ ಮಧ್ವಮುನಿಯ ಮತದಿತಿದ್ದು ಪ್ರಸನ್ನವೆಂಕಟರಮಣನೆ ಎನ್ನಉದ್ಧರಿಸೊ ಸಶಿಗನೆ ನಿನ್ನವನ 3
*******