Showing posts with label ತುತಿ ಪರನ ಪೊರದೇ ನೋಡಿದಾಕ್ಷಣದಲ್ಲಿ vijaya vittala. Show all posts
Showing posts with label ತುತಿ ಪರನ ಪೊರದೇ ನೋಡಿದಾಕ್ಷಣದಲ್ಲಿ vijaya vittala. Show all posts

Wednesday, 16 October 2019

ತುತಿ ಪರನ ಪೊರದೇ ನೋಡಿದಾಕ್ಷಣದಲ್ಲಿ ankita vijaya vittala

ತುತಿ |
ಪರನ ಪೊರದೇ
ನೋಡಿದಾಕ್ಷಣದಲ್ಲಿ ಅನಂತ ಜನ್ಮದಿಂದ |
ಮಾಡಿದ ಪಾಪಗಳು ಪರಿದವಯ್ಯ |
ಆಡಲೇನು ತೋಯ ಸ್ಪರ್ಶವಾಗಲು | ನಲಿ |
ದಾಡಿದರು ಗೋತ್ರಜರು ಇವನ ಪುಣ್ಯಕ್ಕೆ ಎಣಿಯೇ 1

ಮಿಂದು ಮನಃಪೂರ್ವಕದಿ ಕೊಂಡಾಡಲು ವಳಗೆ |
ಪೊಂದಿದ ದಾಸವರು ಸುಮ್ಮನಹರೋ |
ವೃಂದಾರಕರ ಬಳಗ ಇವನ ಸಾಧನೆ ಮಾಳ್ಪಾ
ನಂದದಲಿ ಇಪ್ಪನೆ ಅಭಿಮೊಗರಾಗಿ2

ವರನ ಕೊಡುವೆನೆಂದು ವೈಷ್ಣವ ಮಣಿಯಿಂದ |
ಧರೆಯೊಳಗೆ ಜನಿಸದೆ ಜಗಜ್ಜನನಿ |
ಕರಸಿಕೊಂಡೆ ನೀನು ವರದೆ ವರದೆ ಎಂದು |
ವರವ ಕೊಡು ಎನಗೆ ಸುಜನರು ಮೆಚ್ಚವಂದದಲಿ 3

ಇದನೆ ಬೇಡಿಕೊಂಬೆ ಇರಳು ಹಗಲು ನೀನೆ |
ಒದಗಿ ಬಿನ್ನಹ ಮಾಡು ನಿನ್ನ ಪತಿಗೆ |
ಮುದದಿಂದ ಹರಿಯಾಪ್ರವಿಷ್ಠಾಪ್ರವಿಷ್ಠ ಕಥೆ |
ತುದಿನಾಲಿಗೆಯಲ್ಲಿ ಬರಲಿ ಬಣ್ಣಿಸುವಂತೆ 4

ಪಾಂಚಜನ್ಯಾದ್ರಿಯಲ್ಲಿ ಉದುಭವಿಸಿ ತುಂಗೆಯೊಳು |
ಪಂಚನದಿ ಸಂಗಮವೆಂದೆನಿಸಿದೆ |
ಪಂಚವಿಂಶತಿ ನಮ್ಮ ವಿಜಯವಿಠ್ಠಲದೇವ |
ಮೂರ್ತಿ ಮನದೊಳಗಿರಲಿ5#
*********