Showing posts with label ವಿಶ್ವೇಶ ವೆಂಕಟೇಶ ವಿಶ್ವಾದಿ ಪರರೂಪಿ krishnavittala. Show all posts
Showing posts with label ವಿಶ್ವೇಶ ವೆಂಕಟೇಶ ವಿಶ್ವಾದಿ ಪರರೂಪಿ krishnavittala. Show all posts

Monday, 2 August 2021

ವಿಶ್ವೇಶ ವೆಂಕಟೇಶ ವಿಶ್ವಾದಿ ಪರರೂಪಿ ankita krishnavittala

ವಿಶ್ವೇಶ ವೆಂಕಟೇಶ ವಿಶ್ವಾದಿ ಪರರೂಪಿ

ಶ್ರೀ ವಿಷ್ಣು ಪರಬ್ರಹ್ಮನಮೋ ನಮೋ ಪ


ವಿಶ್ವಾತ್ಮ ಶ್ರೀಗುರು _ ವಿಶ್ವಾನ್ನ ಅನ್ನದ

ವಿಶ್ವಸ್ಥ ಶ್ರೀ ಕೃಷ್ಣ _ ನಮೋ ನಮೋ ಅ.ಪ


ಕೇಶವಾ ಮಾಧವಾ _ ಗೋವಿಂದ ಅಚ್ಯುತ

ವಾಸುದೇವಾನಂತ _ ನಾರಾಯಣಾ1

ಗೋಧರಾ ಶ್ರೀಕರಾ _ ಶ್ರೀಮತ್ಸ್ಯ ಕಚ್ಛಪ

ಶುದ್ಧಾನಂದಾತ್ಮಕ _ ನಾರಸಿಂಹ 2

ಶ್ರೀಧರಾ ವಾಮನಾ _ ಪ್ರದುಮ್ನ ಹೃಷಿಕೇಶ

ಆದ್ಯಂತ ವರ್ಜಿತ _ ತ್ರಿವಿಕ್ರಮಾ 3

ಭಾರ್ಗವಾ ರಾಘವಾ _ ಶ್ರೀ ಕೃಷ್ಣ ಉಪೇಂದ್ರ

ಯೋಗೇಶ ಬುದ್ಧಕಲ್ಕಿ ಜನಾರ್ದನ 4

ಪದ್ಮಾಕ್ಷ ಪದ್ಮನಾಭ _ ಶ್ರೀ ಮಧುಸೂದನ

ಪದ್ಮೇಶ ಅನಿರುಧ್ಧ _ ಸಂಕರ್ಷಣ 5

ದಾಮೋದರಾ ದತ್ತ _ ಕಪಿಲ ಶಿಂಶುಮಾರ

ಭೂಮಾ ಅಧೋಕ್ಷಜ _ ಸೀಮಾಶೂನ್ಯ 6

ಶ್ರೀ ವಿಷ್ಣುಹರಿಯಜ್ಞ _ ಧನ್ವಂತ್ರಿ ಮಹಿದಾಸ

ಶ್ರೀ ವಂದ್ಯ “ಕೃಷ್ಣವಿಠಲ” ಪಾರಾಶರ7

****