..
kruti by ವಿಶ್ವೇಂದ್ರತೀರ್ಥರು vishwendra teertharu sode mutt
ದಾಸಗೆ ಭಯವೆಲ್ಲಿ
ವಾಸವನನುಜನ
ದಾಸಗೆ ಭಯವೆಲ್ಲಿ ಪ
ದಾಸನಾಗದವಗೆ ಭಯವೆಂದಿಗು ತಪ್ಪದು
ದಾಸನಾಗಿಹಗೆ ಭಯವೆಂದಿಗು ಬಾರದು 1
ತರಳ ಪ್ರಹ್ಲಾದಗೆ ಭಯವೆಂದಿಗು ಸೋಂಕಲಿಲ್ಲ
ತರಳನ ಪಿತಗೆ ಭಯವೆಂದಿಗು ತಪ್ಪಲಿಲ್ಲ 2
ಲಂಕೆಯೊಳಿದ್ದರೂ ದಶಕಂಠನಿಗತಿ ಭಯ
ಲಂಕೆಯ ಬಿಟ್ಟ ವಿಭೀಷಣನಿಗಭಯ 3
ಹರನ ಪೀಡಿಸಿದಾ ಭಸ್ಮಾಸುರಗೆ ಭಯ
ಹರಿಯ ಸ್ತುತಿಸಿದ ಮಹಾದೇವನಿಗಭಯ 4
ರಾಜಾಧಿರಾಜನಿಗೂ ಭಯವೆಂದೂ ತಪ್ಪದು
ರಾಜೇಶ ಹಯಮುಖನೊಲಿದವನಿಗಭಯ 5
***