ಕಾಖಂಡಕಿ ಶ್ರೀ ಕೃಷ್ಣದಾಸರು
ಬಾರೋ ಬಾರೋ ರಂಗಾ ಪ
ಬಾರೈಯ್ಯಾ ಯದುವೀರಾ | ಈರೇಳು ಭುವನಾಧಾರಾ | ಶ್ರೀ ರಮಣಿಯ ಮನೋಹರಾ | ವಾರಣ ಭಯ ನಿವಾರಾ | ಕರುಣಾಕರಾ | ದೀನೋದ್ಧಾರಾ | ಸರ್ವಾಧಾರಾ | ಪರಮ ಉದಾರಾ | ಸುರಸಹತಾರಾ | ದಯಾಸಾಗರ 1
ಒದಗುವೆ ಸ್ಮರಣೆಗೆ ನೇಮಾ | ಮದನಜನಕ ಮಹಮಹಿಮಾ | ಜೀಮೂತ ಶಾಮಾ | ಸದ್ಗುಣ ಧಾಮಾ | ಪೂರಿತ ಕಾಮಾ | ತ್ರಿವಿಕ್ರಮಾ | ಅನಂತ ನಾಮಾ | ಲೋಕಾಭಿರಾವi 2
ಅಸುರ ಕುಲ ಸಂಹರಣಾ | ಬಿಸರುಹ ಸಖ ಶತ ಕಿರಣಾ | ಅಸಮನೆ ಮಹಿಪತಿ ಸುತನಾ | ಪೋಷಿಸುವೆ ನೀ ಪರಿಪೂರ್ಣ ಖಗವರ ಗಮನಾ | ಮೃದುತರ ಚರಣಾ | ಅಹಲ್ಯೋದ್ಧರಣಾ | ಕನPsÀರಣಾ 3
***