Showing posts with label ಕೇಳೆ ಯಶೋದೆ ನಿನ್ನ ಮಗನ ಲೂಟಿಯ shree krishna. Show all posts
Showing posts with label ಕೇಳೆ ಯಶೋದೆ ನಿನ್ನ ಮಗನ ಲೂಟಿಯ shree krishna. Show all posts

Wednesday 1 September 2021

ಕೇಳೆ ಯಶೋದೆ ನಿನ್ನ ಮಗನ ಲೂಟಿಯ ankita shree krishna

 ..

ಕೇಳೆ ಯಶೋದೆ ನಿನ್ನ ಮಗನ ಲೂಟಿಯ ಪ


ತಾಳಲಾರೆವೆ ನಾವು ತರಳನ ದುಡುಕುಪೇಳಬಾರದೆ ಗೋಪಾಲಕೃಷ್ಣಗೆ ಬುದ್ಧಿಅಮ್ಮಾ-ಇದು ಚೆನ್ನಾಯಿತು ತಿಳಿದವನಲ್ಲವೆನೀ ಕೇಳೆ ಯಶೋದೆ ನಿನ್ನ ಮಗನ ಲೂಟಿಯ ಅ.ಪ.


ಬಾಲಕನೆಂದು ಲಾಲಿಸಿ ಕರೆದರೆಮೂಲೆ ಮನೆಯೊಳಗೆ ಪೊಕ್ಕುಪಾಲು ಮೊಸರು ಬೆಣ್ಣೆಗಳ ಮೆದ್ದುಕೋಲಲಿ ನೀರ ಕೊಡಗಳೊಡೆದನೀಲವರ್ಣದ ದಿಟ್ಟ ನಿತ್ಯವೀ ಹೋರಾಟಬಾಲೆಯರಲ್ಲಿ ನೋಟ ಬಹಳ ಬಗೆಯಲ್ಲಿತಿಳಿದೆವೆಂದರೆ ಮೇಲೆ ಎಂಜಲುಗುಳಿ ಪೋದಅಮ್ಮಾ ಇದು ಚೆನ್ನಾಯ್ತು ತಿಳಿದವನಲ್ಲವೆನೀ ಕೇಳೆ ಯಶೋದೆ ನಿನ್ನ ಮಗನ ಲೂಟಿಯ 1


ಮತ್ತೆ ಭಾಮಿನಿಯರೆಲ್ಲರು ಕೂಡಿಮಡುವಿನೊಳು ಜಲಕ್ರೀಡೆಯನಾಡಲುಚಿತ್ತಚೋರ ನಮ್ಮ ಸೀರೆಗಳೆಲ್ಲವಹೊತ್ತು ಕೊಂಡು ಮರವನೇರಿದಬತ್ತಲೆ ಭಾಮೆಯರೆಲ್ಲ ಬೇಡಿದರೆ ಕೊಡನಲ್ಲಯುಕ್ತಿ ಬಹುಬಲ್ಲ ಹತ್ತಿಲಿ ಬಂದು ಕರವೆತ್ತಿ ಮುಗಿದರೆ ವಸ್ತ್ರ ಕೊಡುವೆನೆಂದಅಮ್ಮಾ ಇದು ಚೆನ್ನಾಯ್ತು ತಿಳಿದವನಲ್ಲವೆನೀ ಕೇಳೆ ಯಶೋದೆ ನಿನ್ನ ಮಗನ ಲೂಟಿಯ 2


ಸದ್ದು ಮಾಡದೆ ಸರಿ ಹೊತ್ತಿಲಿನಿದ್ದೆಗಣ್ಣಿಲಿ ನಾನಿರಲುಮುದ್ದು ಕೃಷ್ಣ ನಮ್ಮ ಮನೆಯವರಂತೆಮುದದಿಂದಲೆನ್ನನು ತಾ ಕೂಡಿದಎದ್ದು ನೋಡುವೆನಲ್ಲ ಆಹ ಏನೆಂಬುವರೆಲ್ಲಬುದ್ಧಿ ಮೋಸ ಬಂತಲ್ಲ ಪೊದ್ದಿ ಸಲ್ಲಿಸಿದೆಬುದ್ಧಿವಂತನೆಂದರೆ ಪರಿಹಾಸ್ಯ ಮಾಡಿ ನಗುವಅಮ್ಮಾ ಇದು ಚೆನ್ನಾಯ್ತು ತಿಳಿದವನಲ್ಲವೆನೀ ಕೇಳೆ ಯಶೋದೆ ನಿನ್ನ ಮಗನ ಲೂಟಿಯ 3

***