Showing posts with label ಮಂಗಳಂ ಜಯತು ಭಾಗೀರಥಿಗೆ ಜಯ ಮಂಗಳಂ ಯಮುನೆ ಸರಸ್ವತಿಗೆ venkatakrishna. Show all posts
Showing posts with label ಮಂಗಳಂ ಜಯತು ಭಾಗೀರಥಿಗೆ ಜಯ ಮಂಗಳಂ ಯಮುನೆ ಸರಸ್ವತಿಗೆ venkatakrishna. Show all posts

Tuesday, 1 June 2021

ಮಂಗಳಂ ಜಯತು ಭಾಗೀರಥಿಗೆ ಜಯ ಮಂಗಳಂ ಯಮುನೆ ಸರಸ್ವತಿಗೆ ankita venkatakrishna

by yadugiriyamma  

 ಗಂಗಾನದಿ

ಮಂಗಳಂ ಜಯತು ಭಾಗೀರಥಿಗೆ

ಜಯ ಮಂಗಳಂ ಯಮುನೆ ಸರಸ್ವತಿಗೆ ಪ


ವಾಮನರೂಪಿಲಿ ದಾನವ ಬೇಡಿ

ಪ್ರೇಮದಿಂ ಪಾದವ ಮೇಲಕ್ಕೆ ನೀಡಲು

ನೇಮದಿಂ ತಡೆದು ಬ್ರಹ್ಮಾಂಡದಿಂದ

ಸುಮ್ಮಾನದಿಂ ಪೊರಟು ಬಂದ ದೇವಿಗೆ 1


ಹರಿಯ ಪಾದದಲಿ ಉದ್ಭವಿಸಿದ ಗಂಗೆಗೆ

ಹರನ ಶಿರದಲ್ಲಿ ವಾಸವಾದವಳಿಗೆ

ಭರದಿ ಭಗೀರಥ ತಪವ ಮಾಡಲು

ಧರಿಣಿಗೆ ಇಳಿದು ಬಂದ ದೇವಿಗೆ 2


ಭಗೀರಥನ ಪಥವಿಡಿದು ಬೇಡಿ ಬಂದ

ಭಾಗೀರಥಿ ಎಂಬೊ ಪೆಸರು ಪೊತ್ತು ಅವನ

ಭಾಗಿಗಳಿಗೆ ಮೋಕ್ಷವನಿತ್ತು ಹರುಷದಿ

ಯೋಗಿಗಳು ಸ್ತುತಿಪ ಗಂಗಾದೇವಿಗೆ 3


ಜನ್ಹುಋಷಿಯು ಪವನಮಾಡಿ ಬಿಡುವಾಗ

ಜಾಹ್ನವಿ ಎನಿಸಿದೆ ಜಗದೊಳಗೆ

ಜನರಿಗೆ ಜನನ ಮರಣ ಕೊಡದೆ ಬಿಡಿಸಿ

ಜಾಣತನದಿ ಮುಕ್ತಿ ಕೊಡುವವಳಿಗೆ 4


[ದೃಡದಿ ] ಬಲಭಾಗದಿ ಭಗೀರಥಿ ಬರುತಿರೆ

ಯೆಡದ ಭಾಗದಲಿಯಮುನೆ ಬರುತಿರಲು

ನಡುವೆ ಸರಸ್ವತಿ ತ್ರಿವೇಣಿಯೆಂದೆನಿಸಿ

ಪೊಡವಿಗಧಿಕವಾಗಿ ಮೆರೆಯುವ ದೇವಿಗೆ 5


ಬಂದು ಭಾಗೀರಥಿಗೆ ವಂದನೆಗಳ ಮಾಡಿ

ತಂದು ಪುಷ್ಪವ ತುಳಸಿ ಕ್ಷೀರವನು

ಚಂದದಿಂ ಪೂಜೆಮಾಡಿ ವೇಣಿಮಾಧವಗೆ

ಅಂದು ವಂದಿಸಿದವರಿಗೆ 6


ಸೃಷ್ಟಿಯ ಮೇಲುಳ್ಳ ಜನರೆಲ್ಲರು ಬಂದು

ಮುಟ್ಟಿ ಮುಳುಗಿ ಪೂಜಿಸಿದವರ

ಇಷ್ಟಾರ್ಥಗಳನು ಕೊಡುವೆನೆಂದೆನುತಲೆ

ದಿಟ್ಟ ವೆಂಕಟನ ಪಾದ ತೋರಿಸುವಳು 7

****