ಬೇಡುವರೋ ಸುಖವ ರಂಗಯ್ಯ ನಿನ್ನ
ಬೇಡುವರೋ ಸುಖವ|| ಪ ||
ಬೇಡುವರೋ ಸುಖ ಬೇಡರು ಕಷ್ಟವ
ಮಾಡಲರಿಯರಿದರುಪಾಯವ ||ಅ ಪ ||
ಕಿಟ್ಟಾ ತುಳಿದು ಒಮ್ಮನ್ಹಿಟ್ಟಾ ಬೀಸುವರು
ಕುಟ್ಟರು ರಂಗವಲ್ಲಿಯ ಕುಟ್ಟರು ರಂಗವಲ್ಲಿಯ
ಸಾಲುಸಾಲೆಮ್ಮೆಯ ಸೋಲದೆ ತೊಳೆವರು
ಸಾಲಿಗ್ರಾಮಕೆ ನೀರೆರೆಯರೊ ಜನ || 1||
ಬೀಗರೂಟಕೆ ಅನೇಕ ಭೋಗವು
ಜೋಳವು ಓಗರ ಬ್ರಾಹ್ಮರೆಲೆಯೊಳು
ಖಮ್ಮನೆ ತುಪ್ಪ ತಮ್ಮನೆಯವರಿಗೆ
ಖಮ್ಮಟು ದೇವ ಬ್ರಾಹ್ಮಣರಿಗೆ ||2 ||
ಇದ್ದ ಪದಾರ್ಥವನ್ನು ಶುದ್ಧ ಭಕುತಿಯಿಂದ
ಮಧ್ವೇಶಗರ್ಪಿಸಿ ಭುಂಜಿಸರೋ
ಕೆಟ್ಟದ್ದು ತಾವು ಮಾಡಿ ಬಿಟ್ಟೆಮ್ಮನು ಪ್ರಾಣೇಶ
ವಿಟ್ಠಲನೆಂದು ಮಿಡುಕುವರೋ ಜನ|| 3||
***
Bēḍuvarō sukhava raṅgayya ninna
bēḍuvarō sukhava|| pa ||
bēḍuvarō sukha bēḍaru kaṣṭava
māḍalariyaridarupāyava ||a pa ||
kiṭṭā tuḷidu om’manhiṭṭā bīsuvaru
kuṭṭaru raṅgavalliya kuṭṭaru raṅgavalliya
sālusālem’meya sōlade toḷevaru
sāligrāmake nīrereyaro jana || 1||
bīgarūṭake anēka bhōgavu
jōḷavu ōgara brāhmareleyoḷu
kham’mane tuppa tam’maneyavarige
kham’maṭu dēva brāhmaṇarige ||2 ||
idda padārthavannu śud’dha bhakutiyinda
madhvēśagarpisi bhun̄jisarō
keṭṭaddu tāvu māḍi biṭṭem’manu prāṇēśa
viṭṭhalanendu miḍukuvarō jana|| 3||
***