ಇಂದಿರಾರಮಣ ಗೋವಿಂದ ನಾರಾಯಣ||2||
ವಂದಿಸುವೆ ತವಪಾದ ಪಂಕಜಕೆ ಹರಸೆನ್ನ
||ಇಂದಿರಾರಮಣ||
ಮಂದರಾಚಲವೆತ್ತಿ ಗೋವುಗಳ ಪೊರೆದಾತ||2||
ವಂದನೆಯು ನಿನ್ನಡಿಗೆ ಪೊರೆಯೆನ್ನ||2||
ಪೊರೆಯೆನ್ನ ಕ್ರಷ್ಣಾ....ಕ್ರಷ್ಣಾ....
ಹರಿಗೋವಿಂದಂ ಹರಿಗೋವಿಂದಂ
ಗೋವಿಂದಂ ಹರಿ ಗೋಪಾಲಂ
||ಹರಿಗೋವಿಂದಂ||
ಓಂ ನಮೋ ನಾರಾಯಣಂ
ಶ್ರೀ ಜಯ ನಾರಾಯಣಂ
ಶ್ರೀ ಹರಿ ನಾರಾಯಣಂ
ನಮೋ ನಮೋ ನಾರಾಯಣಂ
||ಓಂ ನಮೋ||
||ಹರಿ ಗೋವಿಂದಂ||
ಮಂಗಳಂ ಭಗವಾನ್ ವಿಷ್ಣು
ಮಂಗಳಂ ಮಧುಸೂದನಂ
ಮಂಗಳಂ ದೇವಕಿ ಪುತ್ರೋ
ಮಂಗಳಂ ಗರುಡಧ್ವಜ
ಕ್ರಷ್ಣಾಯ ವಾಸುದೇವಾಯ
ದೇವಕಿನಂದನಾಯಚ
ನಂದಗೋಪ ಕುಮಾರಾಯ
ಗೋವಿಂದಾಯ ನಮೋ ನಮ:
ಮತ್ಸ್ಯಾವತಾರವ ತಾಳಿದನೆ
ಮಂದರಾಚಲ ಬೆನ್ನೊಳು ಪೊತ್ತವನೆ
||ಮತ್ಸ್ಯಾ||
ಹಚ್ಚಸೂಕರನಾಗಿ ಬಾಳಿದನೆ||2||
ಮದಮೆಟ್ಟಿ ಹಿರಣ್ಯನ ಸೀಳಿದನೆ||2||
ಓಂ ನಮೋ ನಾರಾಯಣಂ
ಶ್ರೀ ಜಯ ನಾರಾಯಣಂ
ಶ್ರೀ ಹರಿ ನಾರಾಯಣಂ
ನಮೋ ನಮೋ ನಾರಾಯಣಂ
||ಹರಿಗೋವಿಂದಂ||
ಕುಂಭಿನಿ ದಾನವ ಬೇಡಿದನೆ
ಕ್ಷಾತ್ರರೆಂಬವರನು ಹತ ಮಾಡಿದನೆ
||ಕುಂಭಿನಿ||
ಅಂಬುಧಿಗೆ ಶರ ಹೂಡಿದನೆ||2||
ಕಮಲಾಂಬಕ ಗೊಲ್ಲರೊಳಾಡಿದನೆ||2||
ಓಂ ನಮೋ ನಾರಾಯಣಂ
ಶ್ರೀ ಜಯ ನಾರಾಯಣಂ
ಶ್ರೀ ಹರಿ ನಾರಾಯಣಂ
ನಮೋ ನಮೋ ನಾರಾಯಣಂ
||ಹರಿಗೋವಿಂದಂ||
ಸಾಧಿಸಿ ತ್ರಿಪುರರ ಗೆಲಿದವನೆ
ವ್ಲೇಂಚರ ಛೇಧಿಸಿ ಮೆರೆದವನೆ
||ಸಾಧಿಸಿ||
ಸಾಧಿಸಿ ಸಕಲವ ತಿಳಿದವನೆ||2||
ಬಾಡದಾದಿ ಕೇಶವನಿಗೆ ಒಲಿದವನೆ
ಆದಿಕೇಶವನಿಗೆ ಒಲಿದವನೆ
ಓಂ ನಮೋ ನಾರಾಯಣಂ
ಶ್ರೀ ಜಯ ನಾರಾಯಣಂ
ಶ್ರೀ ಹರಿ ನಾರಾಯಣಂ
ನಮೋ ನಮೋ ನಾರಾಯಣಂ
||ಹರಿಗೋವಿಂದಂ||
***********