ಕೂಸಿನಲ್ಲಿ ಬಾಲಕೃಷ್ಣ ಕೇಶವಾರ್ಯ ಪುತ್ರನಲ್ಲಿವಾಸಮಾಡಿ ಸತತ ಮನವ ಪೋಷಿಸೂವನು 1
ತರುಣಿಯಲ್ಲಿ ಮಾಧವವಿರುವ ಶರಣರೊಳಗೆ ವಸುದೇವನರಿತು ತೋಷಿಸುವುದು ಸತತ ಹರುಷದಿಂದಲೀ 2
ಮಗಳ ಮಹಿಳೆ ತನುವಿಲಿರುವ ಅಗಣಿತಾತ್ಮ ಗೋವಿಂದಮಗಳೊಳಿರುವ ವಾಸುದೇವ ಖಗವರೇಣ್ಯನು 3
ಮಿತ್ರನಲಿ ಮುಕುಂದ ಪತ್ನಿ ಸೋದರನಿರುದ್ಧಧಾತ್ರಿ ದಿವಿಜ ನಾರಾಯಣನು ವಸ್ತಿ ಮಾಡಿಹನು4
ಸುರಭಿಯಲ್ಲಿ ವಿಷ್ಣುರೂಪಿ ತುರಗದಲ್ಲಿ ವಾಮನಾತ್ಮಇರುವ ಸಂಕರ್ಷಣಾಖ್ಯ ಚರಮ ಜಾತಿಯಲೀ 5
ಕ್ಷತ್ರಿಯರಲ್ಲಿ ಜನಾರ್ದನನು ನಿತ್ಯ ವೈಶ್ಯ ಪ್ರದ್ಯುಮ್ನಭೃತ್ಯರಲ್ಲಿ ಮಹಿದ್ರಾಸ ಕೃತ್ಯ ನಡೆಸುವಾ 6
ಮಹಿಷಿಯಲ್ಲಿ ಉಪೇಂದ್ರ ಗಜದಲ್ಲಿ ಚಕ್ರಪಾಣಿಬೆಕ್ಕಿನಲ್ಲಿ ವಿಶ್ವರೂಪ ಸತತ ತಿಳಿವುದೂ 7
ಇರುವೆಯಲ್ಲಿ ತ್ರಿವಿಕ್ರಮನು ಇರುವ ಶುನಕ ಭೂತ ಭಾವನಸರ್ವರೊಳಗೆ ಅನಂತರೂಪ ಹರಿ ನಿವಾಸಿಪ 8
ನಿತ್ಯದಲ್ಲಿ ಹರಿಯು ಹೀಗೆ ಚಿತ್ತವಿಟ್ಟು ಲಕ್ಷಣೀಯುವರ್ತಿಸುತಲಿ ಯದುವರೇಣ್ಯನ ಪತ್ನಿಯಾದಳು 9
ಪರಮಪುರುಷನಮಲ ರೂಪ ಸ್ಮರಿಸುತಲೆ ಪೋಷ್ಯರಲ್ಲಿತೊರೆದು ಕರ್ಮಲೇಪ ಶಿರಿಯ ಹೋದುವಾ 10
ನಂದಸುತನ ತಿಳಿದು ಪೋಷ್ಯ ವೃಂದದಲ್ಲಿ ಭೋಗ ನೀಡಿಇಂದಿರೇಶ ನಮಗೆ ಮೋಕ್ಷಾನಂದ ಕೊಡುವನು
***
ತರುಣಿಯಲ್ಲಿ ಮಾಧವವಿರುವ ಶರಣರೊಳಗೆ ವಸುದೇವನರಿತು ತೋಷಿಸುವುದು ಸತತ ಹರುಷದಿಂದಲೀ 2
ಮಗಳ ಮಹಿಳೆ ತನುವಿಲಿರುವ ಅಗಣಿತಾತ್ಮ ಗೋವಿಂದಮಗಳೊಳಿರುವ ವಾಸುದೇವ ಖಗವರೇಣ್ಯನು 3
ಮಿತ್ರನಲಿ ಮುಕುಂದ ಪತ್ನಿ ಸೋದರನಿರುದ್ಧಧಾತ್ರಿ ದಿವಿಜ ನಾರಾಯಣನು ವಸ್ತಿ ಮಾಡಿಹನು4
ಸುರಭಿಯಲ್ಲಿ ವಿಷ್ಣುರೂಪಿ ತುರಗದಲ್ಲಿ ವಾಮನಾತ್ಮಇರುವ ಸಂಕರ್ಷಣಾಖ್ಯ ಚರಮ ಜಾತಿಯಲೀ 5
ಕ್ಷತ್ರಿಯರಲ್ಲಿ ಜನಾರ್ದನನು ನಿತ್ಯ ವೈಶ್ಯ ಪ್ರದ್ಯುಮ್ನಭೃತ್ಯರಲ್ಲಿ ಮಹಿದ್ರಾಸ ಕೃತ್ಯ ನಡೆಸುವಾ 6
ಮಹಿಷಿಯಲ್ಲಿ ಉಪೇಂದ್ರ ಗಜದಲ್ಲಿ ಚಕ್ರಪಾಣಿಬೆಕ್ಕಿನಲ್ಲಿ ವಿಶ್ವರೂಪ ಸತತ ತಿಳಿವುದೂ 7
ಇರುವೆಯಲ್ಲಿ ತ್ರಿವಿಕ್ರಮನು ಇರುವ ಶುನಕ ಭೂತ ಭಾವನಸರ್ವರೊಳಗೆ ಅನಂತರೂಪ ಹರಿ ನಿವಾಸಿಪ 8
ನಿತ್ಯದಲ್ಲಿ ಹರಿಯು ಹೀಗೆ ಚಿತ್ತವಿಟ್ಟು ಲಕ್ಷಣೀಯುವರ್ತಿಸುತಲಿ ಯದುವರೇಣ್ಯನ ಪತ್ನಿಯಾದಳು 9
ಪರಮಪುರುಷನಮಲ ರೂಪ ಸ್ಮರಿಸುತಲೆ ಪೋಷ್ಯರಲ್ಲಿತೊರೆದು ಕರ್ಮಲೇಪ ಶಿರಿಯ ಹೋದುವಾ 10
ನಂದಸುತನ ತಿಳಿದು ಪೋಷ್ಯ ವೃಂದದಲ್ಲಿ ಭೋಗ ನೀಡಿಇಂದಿರೇಶ ನಮಗೆ ಮೋಕ್ಷಾನಂದ ಕೊಡುವನು
***
ಶ್ರೀ ತಿರುಪತಿ ಪಾಂಡುರಂಗಿ ಹುಚ್ಚಾಚಾರ್ಯರ ಕೃತಿ
ಕೂಸಿನಲ್ಲಿ ಬಾಲಕೃಷ್ಣ ಕೇಶವಾರ್ಯ ಪುತ್ರನಲ್ಲಿ
ವಾಸಮಾಡಿ ಸತತ ಮನವ ಪೋಷಿಸುವನು ॥ ೧ ॥
ತರುಣಿಯಲ್ಲಿ ಮಾಧವವಿರುವ ಶರಣರೊಳಗೆ ವಾಸುದೇವ-
ಸರಿತು ತೋಷಿಸುವುದು ಸತತ ಹರುಷದಿಂದಲೀ ॥ ೨ ॥
ಮಗಳ ಮಹಿಳೆ ತನುವಿಲಿರುವ ಅಘಣಿತಾತ್ಮ ಗೋವಿಂದ
ಮಗಳೊಳಿರುವ ವಾಸುದೇವ ಖಗವರೇಣ್ಯನು ॥ ೩ ॥
ಮಿತ್ರನಲಿ ಮುಕುಂದ ಪತ್ನಿ ಸೋದರನಿರುದ್ಧ
ಧಾತ್ರಿ ದಿವಿಜ ನಾರಾಯಣನು ವಸ್ತಿ ಮಾಡಿಹನು । ೪ ।
ಸುರಭಿಯಲ್ಲಿ ವಿಷ್ಣುರೂಪಿ ತುರಗದಲ್ಲಿ ವಾಮನಾತ್ಮ
ಇರುವ ಸಂಕರ್ಷಣಾಖ್ಯ ಚರಮ ಜಾತಿಯಲೀ ॥ ೫ ॥
ಕ್ಷತ್ರಿಯರಲ್ಲಿ ಜನಾರ್ದನನು ನಿತ್ಯ ವೈಶ್ಯ ಪ್ರದ್ಯುಮ್ನ
ಭೃತ್ಯರಲ್ಲಿ ಮಹಿದಾಸ ಕೃತ್ಯ ನಡೆಸುವಾ ॥ ೬ ॥
ಮಹಿಷಿಯಲ್ಲಿ ಉಪೇಂದ್ರ ಗಜದಲ್ಲಿ ಚಕ್ರಪಾಣಿ
ಬೆಕ್ಕಿನಲ್ಲಿ ವಿಶ್ವರೂಪ ಸತತ ತಿಳಿವುದೂ ॥ ೭ ॥
ಇರುವೆಯಲ್ಲಿ ತ್ರಿವಿಕ್ರಮನು ಇರುವ ಶುನಕ ಭೂತಭಾವನ
ಸರ್ವರೊಳಗೆ ಅನಂತರೂಪ ಹರಿ ನಿವಾಸಿಪ ॥ ೮ ॥
ನಿತ್ಯದಲಿ ಹರಿಯು ಹೀಗೆ ಚಿತ್ತವಿಟ್ಟು ಲಕ್ಷಣೀಯು
ವರ್ತಿಸುತಲಿ ಯದುವರೇಣ್ಯನ ಪತ್ನಿಯಾದಳು ॥ ೯ ॥
ಪರಮಪುರುಷನಮಲ ರೂಪ ಸ್ಮರುಸುತಲೆ ಪೊಷ್ಯರಲ್ಲಿ
ತೊರೆದು ಕರ್ಮಲೇಪ ಶಿರಿಯ ಹೊಂದುವಾ ॥ ೧೦ ॥
ನಂದಸುತನ ತಿಳಿದು ಪೋಷ್ಯ ವೃಂದದಲ್ಲಿ ಭೋಗ ನೀಡಿ
ಇಂದಿರೇಶ ನಮಗೆ ಮೋಕ್ಷಾನಂದ ಕೊಡುವನು ॥ ೧೧ ॥
ಶ್ರೀ ಬೆಟ್ಟದ ಆಚಾರ್ಯರು ಈ ಕೃತಿಯ ಮೂಲಕ ಅದೆಷ್ಟು ಅದ್ಭುತವಾದ ಅನುಸಂಧಾನವನ್ನು ಕಲಿಸುತ್ತಿದ್ದಾರೆ ನೋಡಿ. ಕೇಶವನಾಮದ ಈ ಕೃತಿಯಿಂದ ಯಾವ ಯಾವ ಜೀವರಲ್ಲಿ, ಯಾವ ಯಾವ ಅವಸ್ಥೆಯಲ್ಲಿ ಯಾವ ಯಾವ ಪ್ರಾಣಿಯಲ್ಲಿ ಯಾವ ರೂಪದ ಭಗವಂತನ ವಾಸವಿರುತ್ತದೆ ಎಂದು ಸುಂದರವಾಗಿ ಹಾಗು ಸುಲಭವಾಗಿ ತಿಳಿಸಿಹೇಳಿದ್ದಾರೆ. ನೆನೆಪಿಟ್ಟುಕೊಳ್ಳಲು ಸುಲಭವಿದು.
ನಾವು ಸಣ್ಣ ಮಕ್ಕಳನ್ನ ಕಂಡಾಗ ಬಾಲಕೃಷ್ಣನಂತೆ ಇದ್ದಾನೆ. ಪುಟ್ಟ ಕೃಷ್ಣ, ಮುದ್ದು ಕೃಷ್ಣ ಎಂದೇ ಆ ಕೂಸನ್ನು ಕರಿಯುತ್ತಿರ್ತೇವೆ. ಹೆಣ್ಣು ಮಗುವನ್ನು ಕಂಡಾಗ ಪುಟ್ಟ ಲಕ್ಷ್ಮೀ ಅಂತೆಯು, ಗೋಪಿಕೆ ಅಂತೆಯೂ ಹೇಳ್ತಿರ್ತೇವೆ. ಇದು ನಾವಾಗಿ ನಾವು ಮಾಡಿಕೊಂಡದ್ದಲ್ಲ. ಹಿರಿಯರು ಹಾಕಿಕೊಟ್ಟ ಅನುಸಂಧಾನದ ಕ್ರಮ. ಅದನ್ನೇ ಇಲ್ಲಿ ಸಹ ಶ್ರೀ ದಾಸವರ್ಯರು ತಿಳಿಸುತ್ತಿದ್ದಾರೆ.
ಒಂದೊಂದು ನುಡಿ ನೋಡುತ್ತ ಹೋದಾಗ ಸುಲಭವಾಗಿಯೇ ಅರ್ಥವಾಗುವಂತಿದೆ ಈ ಕೃತಿ. ಸಣ್ಣಕೂಸಿನಲ್ಲಿ ಕೃಷ್ಣ ಪರಮಾತ್ಮನ ಬಾಲರೂಪವನ್ನು, ಪುತ್ರನೊಳಗೆ ಕೇಶವನನ್ನು, ತರುಣಿ ಅಂದರೆ ಯುವತಿಯಲ್ಲಿ ಮಾಧವವನ ರೂಪ, ಭಕ್ತರಲ್ಲಿ ವಾಸುದೇವ, ಮಗಳ ತನುವಿನೊಳಗೆ ಗೋವಿಂದ, ಮಗಳೊಳಗೆ ವಾಸುದೇವ, ಹೀಗೆ ಒಂದೊಂದು ನುಡಿಯಲ್ಲಿಯೂ ಯಾರಲ್ಲಿ ಯಾವ ರೀತಿಯ ಪರಮಾತ್ಮನು ವಾಸವಿರ್ತಾನೆ ಎಂದು ತಿಳಿಸುತ್ತಾರೆ.
ಇರುವೆಯಲ್ಲಿ ತ್ರಿವಿಕ್ರಮನು(ಪ್ರಾಚೀನರು ಇದೇ ಅನುಸಂಧಾನ ಮಾಡುತ್ತಾ ದ್ವಾದಶಿಯ ದಿನ ಪಾರಣೆ ಮಾಡಿದಮೇಲೆ ಸಕ್ಕರೆ, ಬೆಲ್ಲದಪುಡಿ, ರವೆ ಮುಂತಾದ ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಇರುವೆಯ ಗೂಡುಗಳಿಗೆ ಹಾಕಿ ಅವುಗಳಲ್ಲಿ ಅಂತರ್ಗತನಾದ ಭಾರತೀರಮಣ ಮುಖ್ಯಪ್ರಾಣಾಂತರ್ಗತ ತ್ರಿವಿಕ್ರರೂಪಿ ಪರಮಾತ್ಮನು ಪ್ರೀತನಾಗಲಿ ಎಂದು ಚಿಂತನೆ ಮಾಡಿ ಆ ಸೇವೆಯನ್ನು ಸಮರ್ಪಿಸುತ್ತಿದ್ದರು) , ಬೆಕ್ಕಿನಲ್ಲಿ ಪರಮಾತ್ಮನ ವಿಶ್ವರೂಪವು, ನಾಯಿಯಲ್ಲಿ ಭೂತಭಾವನ ( ಶಾಸ್ತ್ರದಲ್ಲಿ ಬ್ರಾಹ್ಮಣರಿಗೆ , ನಾಯಿಯ ಸ್ಪರ್ಶ ಮಾಡುವುದು ನಿಷೇಧ ಮಾಡಿದ್ದಾರೆ. ಒಂದು ವೇಳೆ ಸ್ಪರ್ಶವಾದರೆ ಸ್ನಾನ ಮಾಡಿ ಯಜ್ಞೋಪವೀತ ಬದಲಾಯಿಸಬೇಕು ಎನ್ನುವುದು ವಿಧಿ. ಇನ್ನೂ ಸಾಕುವುದಂತೂ ಸರ್ವ ರೀತಿಯಿಂದಲೂ ವರ್ಜ್ಯವೇ. ಆದರೂ ಅನ್ನಾಹಾರಾದಿಗಳನ್ನು ದಯೆಯಿಂದ ಕೊಡಲೇಬೇಕು ಎನ್ನುವುದು ಶಾಸ್ತ್ರದ ವಿಧಿ. ಅವುಗಳಲ್ಲಿಯೂ ಭೂತಭಾವನ ರೂಪದಿಂದ ದೇವರೇ ಸ್ವೀಕರಿಸುತ್ತಾನೆ ಎನ್ನುವುದು ಶಾಸ್ತ್ರ ತಿಳಿಸಿದ ವಿಷಯ). ಹೀಗೆ ಪ್ರಾಣಿಗಳ ಕುರಿತು ತಾರತಮ್ಯೋಕ್ತವಾಗಿ ಹೇಳುತ್ತಲೇ ಕೊನೆಗೆ ಸರ್ವರಲ್ಲಿ ಅನಂತ ರೂಪದಿಂದ ಪರಮಾತ್ಮನು ವಾಸಮಾಡುತ್ತಿದ್ದಾನೆ ಎನ್ನುವ ಶ್ರೀಮದ್ಭಾಗವತದ ಮಾತನ್ನು ಇಲ್ಲಿ ತಿಳಿಸುತ್ತಾರೆ.
ಲಕ್ಷ್ಮೀದೇವಿಯರು ಸದಾ ಈ ಪರಮಾತ್ಮನ ಎಲ್ಲ ರೂಪಗಳನ್ನು ನೋಡುತ್ತ ಸುಖಿಸುತ್ತಿರುತ್ತಾರೆ. ಆ ಅನಂತರೂಪದ ಪರಮಾತ್ಮನನ್ನು ಕಂಡು ಆಶ್ಚರ್ಯಾನಂದದಿಂದ ಆತನ ನಿಜಪತ್ನಿಯಾದಳೆಂದು ತಿಳಿಸಿದ್ದಾರೆ ದಾಸರಾಯರು. ಈ ವಿಶೇಷವನ್ನು ನಾವು ಶ್ರೀ ರಾಜರ ಲಕ್ಷ್ಮೀಶೋಭನ ಪದದಲ್ಲಿಯೂ ಕಾಣಬಹುದು. ಹಾಗೆ ಈ ವಿಶೇಷ ಶ್ರೀಮದ್ಭಾಗವತದಲ್ಲಿ ಬಂದದ್ದೂ ಹೌದು.
ಕೊನೆಯ ನುಡಿಯಿಂದ ಪರಮಪುರುಷನಾದ (ಎಲ್ಲರಿಗಿಂತಲೂ ಶ್ರೇಷ್ಠನಾದ) ಪರಮಾತ್ಮನ ಈ ಅಮಲ ರೂಪಗಳನ್ನು(ದೋಷವಿಲ್ಲದ)ಸ್ಮರಿಸಿದವರಿಗೆ ಕರ್ಮಲೇಪವಾಗುತ್ತದೆ ಅರ್ಥಾತ್ ಕರ್ಮವು ಕಳೆಯುತ್ತದೆ, ಭಗವಂತನು ಅಮಲ ಎಂದು ಚಿಂತಿಸುವುದರಿಂದ ನಮ್ಮಲ್ಲಿರುವ ಅಜ್ಞಾನಾದಿ ಅನಂತ ಮಲಗಳು ನಾಶವಾಗುತ್ತವೆ ಎನ್ನುವ ಸುಂದರವಾದ ತತ್ವವನ್ನು ತಿಳಿಸುತ್ತಾ ನಂದಗೋಪನ ಸುತನಾದ ಶ್ರೀಕೃಷ್ಣಪರಮಾತ್ಮನನ್ನು ನಿಜವಾಗಿ ಅರಿತವರಿಗೆ ಆ ಇಂದಿರೇಶ ಅಭಿನ್ನ ಶ್ರೀಹರಿಯು ಮೋಕ್ಷದ ಆನಂದವನ್ನು ನೀಡುತ್ತಾನೆ ಎಂದು ಸಾಧನೆಯ ಅನುಸಂಧಾನದ ಕ್ರಮವನ್ನು ತಿಳಿಸಿಹೇಳಿದ್ದಾರೆ ಶ್ರೀ ಪಾಂಡುರಂಗಿ ಹುಚ್ಚಾಚಾರ್ಯರು.
ಶ್ರೀಮದ್ಹರಿಕಥಾಮೃತಸಾರದಲ್ಲಿ ನಮ್ಮ ಮಾನ್ವಿ ಪ್ರಭುಗಳು ಈ ವಿಷಯದ ವಿಸ್ತಾರವನ್ನು ನಮಗೆ ನೀಡಿದ್ದಾರೆ.
ಈ ರೀತಿಯ ಅನುಸಂಧಾನ ನಮ್ಮ ಜೀವನದಲ್ಲಿ ಪ್ರತಿ ಕಾರ್ಯದಲ್ಲಿ ಆಗಲಿ ಎಂದು ಶ್ರೀ ಬೆಟ್ಟದ ಆಚಾರ್ಯರ ಅಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ವೆಂಕಟೇಶನಲ್ಲಿ ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾ..
smt. padma sirish
ಜೈ ವಿಜಯರಾಯ
ನಾದನೀರಾಜನದಿಂ ದಾಸಸುರಭಿ 🙏🏽
***