ಮನ್ಮಥಜನಕನ ಮರೆತ ಮನುಜರು ಮರ ಮರ ಮರ ಮರಾ ಮರಾ
ಚಿನ್ಮಯರೂಪನ ಚಿಂತಿಸದವನು ಛಿ ಛಿ ಛಿ ಛಿ ಛೀ ಮನುಜ ||ಪ||
ಸುರರಿಂ ವಂದ್ಯನ ಸುತ್ತದ ಕಾಲು ಸೂಳೆಮನೆಮಂಚದ ಕಾಲು
ಉರಗಶಯನನ ನುಡಿಯದ ನಾಲಿಗೆ ಉಡುವಿನ ನಾಲಿಗೆಯು ||
ನಾರಾಯಣನ ಕಥೆ ಕೇಳದ ಕಿವಿ ಸೋರುವ ಮಾಳಿಗೆ ನಾಳಗಳು
ಸರಸಿಜ ನಾಭನ ಎತ್ತದ ಹೆಗಲು ಸತ್ತ ಕುರಿಯ ಹೆಗಲು ||
ಹರಿನೈವೇದ್ಯ ಉಣ್ಣದ ಬಾಯಿ ಹರಿದಾಡುವ ಹಾವಿನ ಹೋರು
ನರಹರಿರೂಪನ ನೋಡದ ಕಣ್ಣು ನವಿಲುಗರಿಯ ಕಣ್ಣು ||
ಕರಿವರದನ ಪೂಜಿಸದ ಕರಗಳು ದಾರಿಯ ತೋರುವ ಮರದ ಕೈಗಳು
ಗರುಡಗಮನನ ನಮಿಸದ ಶಿರವು ಉರಗನ ವಿಷತಲೆಯು ||
ಮಂಗಳಮೂರ್ತಿಯ ಪಾಡದ ಕಂಠ ಒಡೆದು ಹೋದ ಹರವಿನ ಕಂಠ
ರಂಗಪುರಂದರವಿಠಲನ ಮರೆತವ ರಜಕನ ಮನೆ ಕತ್ತೆಯೆ ನಿಜವು ||
***
pallavi
manmatha janakana manujaru mar mara mara marA marA cinmaya rUpana cintisadavanu chI chI chI chI chI manuja
caraNam 1
surarim vandyana suttada kAlu sULe mane mancada kAlu
uraga shayanana nuDiyada nAlige uDuvina nAligeyu
caraNam 2
nArAyaNana kathe kELada kivi sOruva mALige nALagaLu
sarasija nAbhana ettada heglu satta kuriya hegalu
caraNam 3
hari naivEdya uNNada bAyi haridADuva hAvina hOru
narahari rUpana nODada kaNNu navilugariya kaNNu
caraNam 4
karivaradana pUjisada karagaLu dAriya tOruva marada kaigaLu
garuDa gamanana namisada shiravu uragana viSadaleyu
caraNam 5
mangaLa mUrtiya pADada kaNTha oDedu hOda haravina kaNTha
ranga purandara viTTalana maretava rajakana mane katteye nijavu
***