ಕಾಖಂಡಕಿ ಶ್ರೀ ಮಹಿಪತಿರಾಯರು
ಇಕ್ಕೊ ಇಲ್ಲೆವೆ ಅದ ನಿಜಧನಾ ತಕ್ಕೊಂಬುದು ಬಲುಕಠಿಣ P
ಅದಕೊಂದದ ಉಪಾಯ ನೋಡಿ ಸದ್ಗುರುಪಾದಕ ಮನಗೂಡಿ ಒದಗಿ ಬಾಹುದು ತಾಂ ಕೈಗೂಡಿ ಇದೇ ಸಾಧಿಸಿ ಸುಖ ಸೂರ್ಯಾಡಿ 1
ಎಡಬಲಕ ತಾಂ ತುಂಬೇದ ದೃಢಮನಕ ತಾಂ ಸಿದ್ಧದ ಮೂಢಜನರಿಗಿದೇ ದೂರದ ನೋಡೇನೆಂದರ ಬಲು ಸಾರ್ಯದ 2
ಗುರುಪಾದಲ್ಯದ ಧನಸಮಸ್ತ ಅರಿತುಕೊಂಬುದು ಮನಮಾಡಿ ಸ್ವಸ್ಥ ತರಳಮಹಿಪತಿಗಿದೆ ಸುಪ್ರಸ್ತ ಗುರುನಾಥನೆ ತಾಂ ಸುವಸ್ತಾ 3
***