Wednesday, 1 September 2021

ಇಕ್ಕೊ ಇಲ್ಲೆವೆ ಅದ ನಿಜಧನಾ ತಕ್ಕೊಂಬುದು ಬಲುಕಠಿಣ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಇಕ್ಕೊ ಇಲ್ಲೆವೆ ಅದ ನಿಜಧನಾ ತಕ್ಕೊಂಬುದು ಬಲುಕಠಿಣ P
ಅದಕೊಂದದ ಉಪಾಯ ನೋಡಿ ಸದ್ಗುರುಪಾದಕ ಮನಗೂಡಿ ಒದಗಿ ಬಾಹುದು ತಾಂ ಕೈಗೂಡಿ ಇದೇ ಸಾಧಿಸಿ ಸುಖ ಸೂರ್ಯಾಡಿ 1 
ಎಡಬಲಕ ತಾಂ ತುಂಬೇದ ದೃಢಮನಕ ತಾಂ ಸಿದ್ಧದ ಮೂಢಜನರಿಗಿದೇ ದೂರದ ನೋಡೇನೆಂದರ ಬಲು ಸಾರ್ಯದ 2 
ಗುರುಪಾದಲ್ಯದ ಧನಸಮಸ್ತ ಅರಿತುಕೊಂಬುದು ಮನಮಾಡಿ ಸ್ವಸ್ಥ ತರಳಮಹಿಪತಿಗಿದೆ ಸುಪ್ರಸ್ತ ಗುರುನಾಥನೆ ತಾಂ ಸುವಸ್ತಾ 3
***

No comments:

Post a Comment